ಕುಶಾಲನಗರ, ಜು. 6: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಅಧ್ಯಕ್ಷರಾಗಿ ವಿ.ಪಿ. ನಾಗೇಶ್ ಆಯ್ಕೆಯಾಗಿದ್ದಾರೆ.

ನೂತನ ಸಾಲಿನ ಉಪಾಧ್ಯಕ್ಷರಾಗಿ ಬಿ.ಎಲ್. ಉದಯಕುಮಾರ್, ಎಸ್.ಎಂ. ಸತೀಶ್, ಕಾರ್ಯದರ್ಶಿಯಾಗಿ ಬಿ.ಎಲ್. ಅಶೋಕ್, ಖಜಾಂಚಿಯಾಗಿ ಬಿ.ಆರ್. ನಟರಾಜ್, ವಾಸವಿ ಮಹಲ್ ಉಸ್ತುವಾರಿಯಾಗಿ ಎಸ್.ಎನ್. ನಾಗೇಂದ್ರ ಆಯ್ಕೆಯಾಗಿದ್ದಾರೆ..

ಸಂಘದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಆಡಳಿತ ಮಂಡಳಿಗೆ ನಿರ್ಗಮಿತ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಅಧಿಕಾರ ಹಸ್ತಾಂತರ ಮಾಡಿದರು.