ಕುಶಾಲನಗರ, ಜು. 6: ಮೈಸೂರು ಕಡೆಯಿಂದ ಕುಶಾಲನಗರ ಮೂಲಕ ಮಂಗಳೂರಿಗೆ ತೆರಳುವ ಭಾರ ಹೊತ್ತ ವಾಹನಗಳನ್ನು ಸಕಲೇಶಪುರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ. ಮಡಿಕೇರಿ ಸಮೀಪ ಕಾಟಕೇರಿ ಬಳಿ ಹೆದ್ದಾರಿಯಲ್ಲಿ ಬಿರುಕು ಉಂಟಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಭಾರೀ ವಾಹನಗಳನ್ನು ಕುಶಾಲನಗರದಿಂದ ಸಕಲೇಶಪುರ ಮಾರ್ಗವಾಗಿ ಸಂಚರಿಸುವಂತೆ ಕ್ರಮಕೈಗೊಂಡಿದೆ. ಈ ಸಂಬಂಧ ಮೈಸೂರು-ಕುಶಾಲನಗರ ಹೆದ್ದಾರಿ ನಡುವೆ ಕೆಆರ್ ನಗರ ಮಾರ್ಗವಾಗಿ ವಾಹನಗಳಿಗೆ ಸೂಚನೆ ನೀಡಲು ಮೈಸೂರು ಹಾಗೂ ಕೊಡಗು ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಿದೆ.