ಮಡಿಕೇರಿ, ಜು. 6 : ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಹಾನಿ ಸಂದರ್ಭ ವಾಸದ ಮನೆಯನ್ನು ಕಳೆದುಕೊಂಡ ಮೂರ್ನಾಡು ರಸ್ತೆ ನಿವಾಸಿ ಸಂತ್ರಸ್ತ ಲೆಸ್ಲಿ ಸಿಕ್ವೇರಾ ಅವರಿಗೆ ಬೆಳ್ತಂಗಡಿ ವಲಯದ ಕಪ್ಪುಚ್ಚಿನ್ ಸಭೆಯ ಮಡಿಕೇರಿ ಮಲಯಾಳಂ ಚರ್ಚ್‍ನ ಧರ್ಮಗುರುಗಳಾದ ಫಾ.ಶಿಬು ಜೋಸೆಫ್ ಅವರ ಸಹಕಾರದಿಂದ ನೂತನ ಮನೆಯನ್ನು ನಿರ್ಮಿಸಿಕೊಡಲಾಗಿದೆ.
ಮನೆಯ ಹಸ್ತಾಂತರ ಕಾರ್ಯಕ್ರಮ ತಾ. 7 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ನಗರದ ಸಂತ ಮೈಕಲರ ಚರ್ಚ್‍ನ ಧರ್ಮಗುರುಗಳಾದ ರೇ|| ಫಾ. ಅಲ್ಫ್ರೆಡ್‍ಜಾನ್ ಮೆಂಡೋನ್ಸ ಅವರು ನೂತನ ಮನೆಯನ್ನು ಉದ್ಘಾಟಿಸಲಿದ್ದಾರೆ.