ಮಡಿಕೇರಿ, ಜು. 6: ಕರ್ನಾಟಕ ಉದ್ಯೋಗ ವಿನಿಮಯದ ಇಲಾಖೆಯು ಜಿಲ್ಲಾಮಟ್ಟದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸುವ ಉದ್ಯೋಗ ಮೇಳವನ್ನು ಸದುಪಯೋಗಪಡಿಸಿಕೊಂಡು ಯುವಜನತೆ ಉತ್ತಮ ಬದುಕು ಕಂಡುಕೊಳ್ಳುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ. ನಗರದ ಪ.ಪೂ. ಕಾಲೇಜಿನಲ್ಲಿ ಇಂದು ಏರ್ಪಡಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಯುವ ಜನತೆ ಇಂಥ ಅವಕಾಶ ಗಳನ್ನು ಬಳಸಿಕೊಂಡು ಸಂದರ್ಶನವನ್ನು ಹೇಗೆ ಎದುರಿಸ ಬೇಕು. ಯಾವ ರೀತಿ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳ ಬೇಕು ಎಂಬಿತ್ಯಾದಿ ತಿಳುವಳಿಕೆ ಪಡೆಯುವಂತೆ ತಿಳಿ ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಿ.ಎ. ಜಗನ್ನಾಥ್, ಕಾಲೇಜು ಪ್ರಾಂಶುಪಾಲ ವಿಜಯ ಮತ್ತಿತರರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು.