ಮಡಿಕೇರಿ, ಜು. 5: ಭಾರತೀಯ ಸಂಬಾರ ಮಂಡಳಿ ವತಿಯಿಂದ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಂಬಾರ ಬೆಳೆಗಳ ಸಸಿಗಳನ್ನು ಮಂಡಳಿಯ ಸಸ್ಯಪಾಲನ ಕೇಂದ್ರಗಳಾದ ಬೆಳಗೊಳ, ನಾರ್ವೆ ಅಂಚೆ, ಕೊಪ್ಪ ತಾ,., ಚಿಕ್ಕಮಗಳೂರು ಜಿಲ್ಲೆ (ಕೊಪ್ಪದಿಂದ 10 ಕಿ.ಮೀ) ದೂ. 08265-236239, ಬೆಟ್ಟದ ಮನೆ, ಮೂಡಿಗೆರೆ ತಾ. ಚಿಕ್ಕಮಗಳೂರು ಜಿಲ್ಲೆ ದೂ. 08263-240902, ಯಸಳೂರು, ಸಕಲೇಶಪುರ ತಾ., ಹಾಸನ ಜಿಲ್ಲೆ, ದೂ.08173-278166, ಐಗೂರು, ಸೋಮವಾರಪೇಟೆ ತಾ., ಕೊಡಗು ಜಿಲ್ಲೆ ದೂ. 08276-287852 ಹಾಗೂ ಬಿಳಿಗೇರಿ, ಮಡಿಕೇರಿ ತಾ., ಕೊಡಗು ಜಿಲ್ಲೆ ದೂ. 08272-227363 ಈ ಕೇಂದ್ರಗಳಿಂದ ಸಸಿಗಳನ್ನು ವಿತರಣೆ ಮಾಡಲಾಗುತ್ತದೆ.
ಏಲಕ್ಕಿ ಸಸಿ (10 ತಿಂಗಳಿಂದ ಮೇಲ್ಪಟ್ಟು) ರೂ. 10, ಕಾಳುಮೆಣಸು (ಬೇರು ಬರಿಸಿದ ಪ್ರತಿ ಬಳ್ಳಿಗೆ) ರೂ. 7, ಕಾಳುಮೆಣಸು ನ್ಯೂಕ್ಲಿಯಸ್ ಸಸಿಗಳು (ಒಂದು ಬಳ್ಳಿಗೆ) ರೂ. 14, ಬುಷ್ ಪೆಪ್ಪರ್ ರೂ. 25, ಲವಂಗ ಸಸಿ ರೂ. 25, ವೆನಿಲ್ಲಾ ಬಳ್ಳಿಗಳು (ಒಂದು ಬಳ್ಳಿಗೆ) ರೂ. 25 ಹಾಗೂ ಜಾಯಿಕಾಯಿ ಸಸಿ ರೂ. 25 ಆಗಿರುತ್ತದೆ. ಆಸಕ್ತ ಬೆಳೆ ಗಾರರು ನಿಗದಿತ ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಭಾರತೀಯ ಸಂಬಾರ ಮಂಡಳಿ, ಕುಶಾಲ ರೆಸಿಡೆನ್ಸಿ, ನ್ಯೂ ಎಕ್ಸ್‍ಟೆನ್‍ಷನ್, ಮಡಿಕೇರಿ-571201, ದೂ. 08272-225791, ಕ್ಷೇತ್ರಾಧಿಕಾರಿಗಳು, ಭಾರತೀಯ ಸಂಬಾರ ಮಂಡಳಿ, ಕುಶಾಲ ರೆಸಿಡೆನ್ಸಿ, ನ್ಯೂ ಎಕ್ಸ್‍ಟೆನ್‍ಷನ್, ಮಡಿಕೇರಿ ದೂ. 08272-223814, ಕ್ಷೇತ್ರಾಧಿಕಾರಿಗಳು, ಭಾರತೀಯ ಸಂಬಾರ ಮಂಡಳಿ, ಚತ್ರಕೆರೆ ಸಮೀಪ, ಚಿಕ್ಕಪೇಟೆ, ವೀರಾಜಪೇಟೆ ದೂ. 08274-257251, ಕ್ಷೇತ್ರಾಧಿಕಾರಿಗಳು, ಭಾರತೀಯ ಸಂಬಾರ ಮಂಡಲಿ, ಬಿ.ಎಲ್.ವಿ. ಕಟ್ಟಡ, ಹೌಸಿಂಗ್ ಬೋರ್ಡ್ ಹತ್ತಿರ, ಐ.ಬಿ. ರಸ್ತೆ, ಸೋಮವಾರಪೇಟೆ ದೂ. 08276-282165 ಹಾಗೂ ಕ್ಷೇತ್ರಾಧಿಕಾರಿಗಳು, ಭಾರತೀಯ ಸಂಬಾರ ಮಂಡಳಿ, ಭಾಗ ಮಂಡಲ ದೂ. 08272-243445ನ್ನು ಸಂಪರ್ಕಿಸಬಹುದು ಎಂದು ಭಾರತೀಯ ಸಂಬಾರ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.