ವೀರಾಜಪೇಟೆ, ಜು. 5: ತಮಿಳುನಾಡಿನ ಚೆನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಸ್ವರ್ಧೆ ರೌಂಡ್ 1-2019ರಲ್ಲಿ ಜಿಪ್ಸಿ ವಾಹನ ರ್ಯಾಲಿ ವಿಭಾಗದಲ್ಲಿ ಅಮ್ಮತ್ತಿಯ ಕಂಗಾಂಡ ಗಗನ್ ಕರುಂಬಯ್ಯ ಹಾಗೂ ಉದ್ದಪಂಡ ತಿಮ್ಮಣ್ಣ ತಂಡ ಪ್ರಥಮ ಸ್ಥಾನ ಪಡೆದು ಕೊಡಗಿಗೆ ಕೀರ್ತಿ ತಂದಿದ್ದಾರೆ.

ಜೂನ್ 28 ಹಾಗೂ 30 ರಂದು ಚೆನೈನಲ್ಲಿ ನಡೆದ ಈ ರ್ಯಾಲಿಯಲ್ಲಿ ಚಾಂಪಿಯನ್ ಮೋಟೊ ಸ್ವೊಟ್ರ್ಸ್ ತಂಡದಲ್ಲಿ ಭಾಗವಹಿಸಿದ್ದರು. ಈ ವಿಭಾಗದಲ್ಲಿ 54 ಜನ ಸ್ವರ್ಧಿಗಳು ಭಾಗವಹಿಸಿದ್ದರು. ಈ ರ್ಯಾಲಿ ಒಟ್ಟು 230 ಕಿ ಮೀ ದೂರವನ್ನು ಒಳಗೊಂಡಿತ್ತು. ಈ ಜಿಪ್ಸಿ ವಿಭಾಗದಲ್ಲಿ ಕಂಗಾಂಡ ಗಗನ್ ಚಾಲಕರಾಗಿದ್ದರೆ ತಿಮ್ಮಣ್ಣ ಸಹ ಚಾಲಕರಾಗಿದ್ದರು.

ಮುಂದೆ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನ ಕೊಯಮುತ್ತೂರುವಿನಲ್ಲಿ ನಡೆಯುವ ರ್ಯಾಲಿಯಲ್ಲಿ ಸಹ ಭಾಗವಹಿಸುತ್ತಿರುವ ಈ ಜೋಡಿ ರ್ಯಾಲಿಗಳಲ್ಲಿ ಭಾಗವಹಿಸುತ್ತಿರುವದಾಗಿ ಹೇಳಿದರು.