ಶನಿವಾರಸಂತೆ, ಜು. 5: ಇಲ್ಲಿನ ರೋಟರಿ ಸಂಸ್ಥೆಯ ಪದಗ್ರಹಣ ಸಮಾರಂಭ ತಾ. 7ರಂದು (ನಾಳೆ) ಸಂಜೆ 6.30ಕ್ಕೆ ಗುಡುಗಳಲೆಯ ಆರ್.ವಿ.ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ರಾಜ್ಯಪಾಲ ಎಂ.ಎಂ. ಸುರೇಶ್ ಚಂಗಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ವಲಯ ಕಾರ್ಯದರ್ಶಿ ಹೆಚ್.ಟಿ. ಅನಿಲ್ ಹಾಗೂ ಸೇನಾನಿ ಎಚ್.ಎಸ್. ವಸಂತಕುಮಾರ್, 2018ರ ಸಾಲಿನ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, 2019-20ರ ಸಾಲಿನ ನೂತನ ಅಧ್ಯಕ್ಷ ಎಸ್.ವಿ. ಶಂಭು ಹಾಗೂ ಕಾರ್ಯದರ್ಶಿ ಎಚ್.ಪಿ. ಚಂದನ್ ಪಾಲ್ಗೊಳ್ಳಲಿದ್ದಾರೆ.