ನವದೆಹಲಿ, ಜು. 5: ರಾಷ್ಟ್ರದ ಅಭಿವೃದ್ಧಿಯೊಂದಿಗೆ ಸರಳತೆ - ಸಮಾನತೆಯ ಹಿತದೃಷ್ಟಿ ಮುಂದಿಟ್ಟುಕೊಂಡು, ‘ಮೊದಲು ಭಾರತ’ ಎಂಬ ಧ್ಯೇಯಾದ್ದೇಶದೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ.ಜನಸಾಮಾನ್ಯರಿಗೆ ಹೊರೆಯಾಗದಂತೆ ತೆರಿಗೆಗಳನ್ನು ವಿಧಿಸದೆ, ಡೀಸೆಲ್-ಪೆಟ್ರೋಲ್ ಮೇಲಿನ ಸೆಸ್ ದರ ಹೆಚ್ಚಿಸಿ, ಉದ್ದಿಮೆದಾರರಿಗೆ ಭರಪೂರ ಕೊಡುಗೆಗಳನ್ನು ನೀಡಿ, ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಮಾಡಿ ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಒತ್ತು 60 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ಪಿಂಚಣಿ ನೀಡುವ ಮೂಲಕ ಸಿಹಿ-ಕಹಿ ಸಮ್ಮಿಶ್ರಣದ ಬಜೆಟ್ ಇಂದು ಮಂಡನೆಯಾಗಿದೆ.ಕುಸಿಯುತ್ತಿರುವ ಜಿಡಿಪಿ ದರವನ್ನು ಹೆಚ್ಚಳ ಮಾಡಲು ತೆರಿಗೆ ನೀತಿಯನ್ನು ಸರಳೀಕರಣಗೊಳಿಸಿ, ನಿರುದ್ಯೋಗ ನಿವಾರಿಸಲು ಹೊಸ ಉದ್ಯಮಗಳಿಗೆ ಬಂಡವಾಳ ಹೂಡಲು ಭರ್ಜರಿ ಕೊಡುಗೆÉಯನ್ನು ನೀಡಲಾಗಿದೆ. ಕೇಂದ್ರದಲ್ಲಿ 2ನೇ ಬಾರಿಗೆ ಅಭೂತಪೂರ್ವ ಬಹುಮತ ಪಡೆದು ಅಧಿಕಾರ ಹಿಡಿದಿರುವ ಎನ್‍ಡಿಎ ಸರ್ಕಾರದ ಬಹುನಿರೀಕ್ಷಿತ ಬಜೆಟ್‍ನ್ನು ಹಣಕಾಸು ಖಾತೆ ಹೊಂದಿರುವ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದರು.

ಕಾಯಕಯೋಗಿ ಬಸವಣ್ಣ ವಚನ, ಚಾಣಕ್ಯನ ತಂತ್ರ, ಉರ್ದುವಿನಲ್ಲಿ ಶಾಯರಿ ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್, ಸುದೀರ್ಘ ಎರಡು ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಿದರು. ರಕ್ಷಣಾ ಸಾಮಾಗ್ರಿಗಳು, ಶಸ್ತ್ರ ಚಿಕಿತ್ಸೆ ಉಪಕರಣಗಳು, ಇಥಿಲಾನ್ ಚರ್ಮೋತ್ಪನ್ನ, ಪಾಮ್ ಆಯಿಲ್ ದರ ಮುಂದಿನ ದಿನಗಳಲ್ಲಿ ಇಳಿಕೆಯಾಗಲಿದೆ.

ಚಿನ್ನ, ಬೆಲೆ ಬಾಳುವ ಲೋಹ, ತಂಬಾಕು, ರಬ್ಬರ್, ಮಾರ್ಬಲ್, ಟೈಲ್ಸ್ ಆಟೋ ಬಿಡಿಭಾಗಗಳು, ಪಿವಿಸಿ ಪೈಪ್, ಒಎಸ್‍ಪಿ ಕೇಬಲ್, ಐಪಿ ಕ್ಯಾಮೆರಾ ಸೇರಿದಂತೆ ಮತ್ತಿತರ ಕೆಲವು ವಸ್ತುಗಳ ಶೀಘ್ರದಲ್ಲೇ ಬೆಲೆ ಏರಿಕೆಯಾಗಲಿವೆ. ಐದು ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡಿ ಶ್ರೀಸಾಮಾನ್ಯರ ಮನವೊಲಿಸಲು ಕಸರತ್ತು ನಡೆಸಿದ್ದಾರೆ. ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆ ಸುಂಕವನ್ನು ಏರಿಕೆ ಮಾಡುವದರ ಜೊತೆಗೆ ಬಂಗಾರ ಆಮದು ಸುಂಕವನ್ನು ಶೇ. 10ರಿಂದ 12.5 ಹೆಚ್ಚಿಸಲಾಗಿದೆ.

ತೆರಿಗೆ ಪಾವತಿದಾರರಿಗೆ ವಿಶೇಷ ಒತ್ತು ಕೊಟ್ಟಿರುವ ನಿರ್ಮಲಾ ಸೀತಾರಾಮನ್, 2ರಿಂದ 3 ಕೋಟಿ ವ್ಯವಹರಿಸುವವರಿಗೆ ಶೇಕಡಾ 5, 5ರಿಂದ 10 ಕೋಟಿ ವ್ಯವಹರಿಸುವವರಿಗೆ ಶೇಕಡಾ 7, 400 ಕೋಟಿ ಮೇಲ್ಪಟ್ಟು ವ್ಯವಹರಿಸುವವರಿಗೆ ಶೇ.25ರಷ್ಟು ತೆರಿಗೆ ವಿಧಿಸಿದ್ದಾರೆ. ಇದೇ ವೇಳೆ ಎಲೆಕ್ಟ್ರಿಕಲ್ ವಾಹನ ಬಳಕೆದಾರರು ಮತ್ತು ಉತ್ಪಾದಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಕೊಡುಗೆಗಳನ್ನು ಕೊಟ್ಟಿರುವದು ಕಂಡುಬಂದಿದೆ.

1.25 ಲಕ್ಷವರೆಗಿನ ವಾಹನ ಖರೀದಿ ಮಾಡಿದರೆ ಸಬ್ಸಿಡಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ 5 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವಾಹನ ಉತ್ಪಾದಿಸಿದರೆ ಜಿಎಸ್‍ಟಿಯಿಂದ ವಿನಾಯ್ತಿ ನೀಡುವದಾಗಿ ಪ್ರಕಟಿಸಿದರು. 45 ಲಕ್ಷವರೆಗಿನ ಮನೆ ಖರೀದಿಸಿದರೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದು, 7ಲಕ್ಷದವರೆಗಿನ ಸಾಲಕ್ಕೆ 15 ವರ್ಷ ತೆರಿಗೆ ವಿನಾಯ್ತಿಯನ್ನು ಮಾಡಲಾಗಿದೆ.

ಗ್ರಾಮೀಣ ಮತ್ತು ಕೃಷಿಗೆ ಒತ್ತು

ಇನ್ನು ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಆದ್ಯತಾ ವಲಯಗಳಾದ ಕೃಷಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ವಸತಿ,

(ಮೊದಲ ಪುಟದಿಂದ) ರಸ್ತೆಗಳ ನಿರ್ಮಾಣ, ವಿದ್ಯುತ್ ಪೂರೈಕೆ, ಶೌಚಾಲಯಗಳ ನಿರ್ಮಾಣ, ಆರೋಗ್ಯ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

2020ರ ಅಂತ್ಯಕ್ಕೆ ದೇಶದಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 1.95 ಕೋಟಿ ವಸತಿಗಳನ್ನು ನಿರ್ಮಾಣ ಮಾಡಲು ಗುರಿ ಇಟ್ಟುಕೊಳ್ಳಲಾಗಿದೆ. ಇನ್ನು ಮುಂದೆ ಮನೆ ನಿರ್ಮಿಸುವವರು ಕೇವಲ 114 ದಿನಗಳೊಳಗೆ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಣೆ ಮಾಡಬೇಕು. 2022ರೊಳಗೆ ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಪೂರೈಕೆ ಹಾಗೂ ಸೀಮೆಎಣ್ಣೆಯನ್ನು ಮುಕ್ತಗೊಳಿಸಲು ಎಲ್ಲರಿಗೂ ಎಲ್‍ಪಿಜಿ ಪೂರೈಕೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಹರ್ ಘರ್, ಹರ್ ಜಲ್ ಎಂಬ ವಿನೂತನ ಯೋಜನೆಯನ್ನು ಜಾರಿ ಮಾಡಲಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಈವರೆಗೂ ದೇಶದೆಲ್ಲೆಡೆ 9.6 ಕೋಟಿ ಶೌಚಾಲಯಗಳ ನಿರ್ಮಾಣದ ಜೊತೆಗೆ ಪ್ರತಿ ಗ್ರಾಮದಲ್ಲೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛ ಭಾರತ ಯೋಜನೆ ವಿಸ್ತರಿಸಲು ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ 30 ಸಾವಿರ ಕಿ.ಮೀ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ಯೋಜನೆಯ 2ನೇ ಹಂತದಲ್ಲಿ 80,250 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 1.25 ಲಕ್ಷ ಕಿ.ಮೀ ರಸ್ತೆ ಮೇಲ್ದರ್ಜೆಗೇರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಉದ್ಯಮಿಗಳಿಗೆ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ, ಕೈಗಾರಿಕೆ, ಹೊಟೇಲ್, ಸರಕು ಸೇರಿದಂತೆ ಮೊದಲಾದವಗಳನ್ನು ಮಾರಾಟ ಮಾಡುವ ಸ್ಮಾರ್ಟ್‍ಅಪ್‍ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಯುವಕರಲ್ಲಿ ಸ್ಮಾರ್ಟಪ್ ಉದ್ದಿಮೆ ಆರಂಭಿಸಲು ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸಲಾಗುವದು. ಇದರ ವಿನ್ಯಾಸ ಮತ್ತು ಕಲ್ಪನೆಯನ್ನು ಸ್ಮಾಟ್ ಅಪ್ ಮುಖೇನ ರೂಪಿಸಲಾಗುವದು. ವಾರ್ಷಿಕವಾಗಿ ಒಂದೂವರೆ ಕೋಟಿ ಕಡಿಮೆ ವಹಿವಾಟು ನಡೆಸುವ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ ಸೌಲಭ್ಯವನ್ನು ನೀಡುವದಾಗಿ ಘೋಷಿಸಿದ್ದಾರೆ.

ಈ ಪಿಂಚಣಿ ಸೌಲಭ್ಯವನ್ನು ಪಡೆಯಲು ಆಧಾರ್ ಹಾಗೂ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು. 1.50 ಕೋಟಿ ಕಡಿಮೆ ಆದಾಯವುಳ್ಳ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಇದಲ್ಲದೆ ಅಟಲ್ ಪಿಂಚಣಿ ಯೋಜನೆಯಡಿ ಸರ್ಕಾರದಿಂದ 60 ವಯಸ್ಸಿನ ಜನರಿಗೆ 1000, 2000, 3000, 4000 ಮತ್ತು 5000 ಕನಿಷ್ಟ ತಿಂಗಳ ಪಿಂಚಣಿ ಸಿಗಲಿದೆ.

ತಿಂಗಳಿಗೆ ಕೇವಲ 40 ರೂ. ಪಾವತಿ ಮಾಡಿ ಬ್ಯಾಂಕ್‍ಗಳಲ್ಲಿ ಹೆಸರು ನೋಂದಾಯಿಸಿಕೊಂಡರೆ 18 ವರ್ಷದಿಂದ 40 ವರ್ಷ ವಯಸ್ಸಿನವರು ಯೋಜನೆಯಿಂದ 1000 ರೂ. ಪಿಂಚಣಿಯನ್ನು ಪಡೆಯಬಹುದಾಗಿದೆ. ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿರುವ ನಿರ್ಮಲಾ ಸೀತಾರಾಮನ್, ರೈಲ್ವೆ ಸಮಗ್ರ ಅಭಿವೃದ್ಧಿಗೆ 12 ವರ್ಷಗಳಲ್ಲಿ 50 ಲಕ್ಷ ಕೋಟಿ ಮೀಸಲಿಡಲು ತೀರ್ಮಾನಿಸಿದ್ದಾರೆ.

ಬಜೆಟ್ ಮುಖ್ಯಾಂಶಗಳು

* ದೇಶದ ಪ್ರಥಮ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ

* ಸಂಪ್ರದಾಯ ಬದಿಗೊತ್ತಿ ಕೆಂಪು ಚೀಲದಲ್ಲಿ ಬಜೆಟ್ ದಾಖಲೆಪತ್ರಗಳನ್ನು ಸಂಸತ್‍ಗೆ ಒಯ್ದ ವಿತ್ತ ಸಚಿವರು.

* ಬಜೆಟ್ ಸೂಟ್‍ಕೇಸ್ ಸಂಸ್ಕøತಿಗೆ ತಿಲಾಂಜಲಿ

* ಲೋಕಸಭಾ ಚುನಾವಣಾ ಫಲಿತಾಂಶವು ಉಜ್ವಲ ಮತ್ತು ಸದೃಢ ಭಾರತದ ಭರವಸೆಯ ಪ್ರತೀಕ

* ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಥಮ ಅವಧಿಯು ಸಾಧನೆಯ ಸರ್ಕಾರ ಎಂಬದು ಸಾಬೀತಾಗಿದೆ

* ಸುಧಾರಣೆ, ಸಾಮಥ್ರ್ಯ ಸಾಬೀತು ಮತ್ತು ಪರಿವರ್ತನೆ ಕೇಂದ್ರ ಸರ್ಕಾರದ ಗುರಿ

* ಐದು ವರ್ಷಗಳÀಲ್ಲಿ ಆಹಾರ ಭದ್ರತೆ ವೆಚ್ಚವನ್ನು ದುಪ್ಪಟ್ಟುಗೊಳಿಸಲಾಗಿದೆ.

* ದೇಶದ ಆರ್ಥಿಕ ಬೆಳವಣಿಗೆ ಹಾಗೂ ಭದ್ರತೆ ಮತ್ತು ಸುರಕ್ಷತೆಗೆ ಪ್ರಥಮಾಧ್ಯತೆ

* ಜನರ ಹಿತರಕ್ಷಣೆಗೆ ಬದ್ಧ, ಅಧಿಕಾರಶಾಹಿಗಳಿಗೆ ಕಡಿವಾಣ

* ಮುಂದಿನ ಕೆಲವು ವರ್ಷಗಳಲ್ಲಿ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಹೆಗ್ಗುರಿ

* ಮೂಲ ಸೌಕರ್ಯಾಭಿವೃದ್ಧಿ ಮತ್ತು ಡಿಜಿಟಲ್ ಆರ್ಥಿಕ ಪ್ರಗತಿಗೆ ಬಂಡವಾಳ

* ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ ಉದ್ಯೋಗಿ ಸೃಷ್ಟಿಗೆ ಆದ್ಯತೆ

* ಭಾರತವು ಉದ್ಯೋಗ ಮತ್ತು ಸಂಪತ್ತು ಸೃಷ್ಟಿಕರ್ತ ದೇಶಕ್ಕಾಗಿ ಹೊರಹೊಮ್ಮಲಿದೆ

* ನವ ಭಾರತ ಸೃಷ್ಟಿಯತ್ತ ಕೇಂದ್ರ ಸರ್ಕಾರ ದಾಪುಗಾಲು

* ವಾಯುಯಾನ ಮಾರುಕಟ್ಟೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ 3ನೇ ಸ್ಥಾನ

* ದೇಶಾದ್ಯಂತ 657 ಮೆಟ್ರೋ ರೈಲು ಜಾಲ ಯಶಸ್ವಿ ಕಾರ್ಯನಿರ್ವಹಣೆ

* ರೈಲ್ವೆ ಮೂಲಸೌಕರ್ಯಭಿವೃದ್ಧಿಗಾಗಿ 2030ರವರೆಗೆ 50ಲಕ್ಷ ಕೋಟಿ ರೂ.ಗಳ ಅಗತ್ಯ

* ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ

* ಭಾರತ್ ಮಾಲಾ, ಸಾರರ ಮಾಲಾ ಹಾಗೂ ಉಡಾನ್‍ನಂಥ ಯೋಜನೆಗಳು ನಗರ-ಗ್ರಾಮೀಣ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೆ ನೆರವಾಗಿದೆ.

* ರಾಷ್ಟ್ರೀಯ ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್, ಐ-ವೇಗಗಳು ಮತ್ತು ವಿಮಾನ ನಿಲ್ದಾಣಗಳಿಗಾಗಿ ನೀಲನಕ್ಷೆ ಸಿದ್ಧ

* ಗಂಗಾ ನದಿಯಲ್ಲಿ ಸರಕು ಸಾಗಣೆ ನೌಕೆಗಳ ಸಂಚಾರ 4 ವರ್ಷಗಳಲ್ಲಿ 4 ಪಟ್ಟು ಹೆಚ್ಚಿಸುವ ಗುರಿ

* ಇಂಧನ ಕ್ಷೇತ್ರ ಸುಂಕ ಪ್ಯಾಕೆಜ್ ಮತ್ತು ರಚನಾತ್ಮಕ ಸುಧಾರಣೆಗಳು ಶೀಘ್ರ ಪ್ರಕಟ

* ಮಾದರಿ ಬಾಡಿಗೆ ಕಾನೂನು ಶೀಘ್ರ ಜಾರಿ ಮತ್ತು ಎಲ್ಲ ರಾಜ್ಯಗಳಲ್ಲೂ ಅನುಷ್ಠಾನ

* ವಿದ್ಯುತ್ ಕ್ಷೇತ್ರಕ್ಕಾಗಿ ಹೊಸ ಪ್ಯಾಕೆಜ್ ಶೀಘ್ರ ಪ್ರಕಟ

* ವಿಶೇಷ ಉದ್ದೇಶ ವಾಹನಗಳ (ಎಸ್‍ಪಿಗಳು) ಮೂಲಕ ಸಬ್‍ಅರ್ಬನ್ ರೈಲುಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ.

* ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ ಮೆಟ್ರೋ ರೈಲುಗಳ ಜಾಲ ವಿಸ್ತರಣೆಗೆ ಕ್ರಮ

* ದೇಶದ ಎಲ್ಲ ರೈಲು ನಿಲ್ದಾಣಗಳ ಆಧುನೀಕರಣ ಮತ್ತು ಮೇಲ್ದರ್ಜೆ ಕಾರ್ಯಕ್ರಮಗಳಿಗೆ ಈ ವರ್ಷ ಚಾಲನೆ.

* ಭಾರತ ಉನ್ನತ ಶಿಕ್ಷಣ ಆಯೋಗ ರಚನೆಗಾಗಿ ಕರಡು ಶಾಸನ ಮಂಡನೆ.

* ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗಾಗಿ 400 ಕೋಟಿ ರೂ.ಗಳು ಮೀಸಲು.

* ಭಾರತಕ್ಕೆ ಅಂತರ್ರಾಷ್ಟ್ರೀಯ ಶೈಕ್ಷಣಿಕ ತಾಣವಾಗುವ ಅಗಾದ ಸಾಮಥ್ರ್ಯವಿದ್ದು, ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡಲು ಉತ್ತೇಜನ.

* ಖೆಲೋ ಇಂಡಿಯಾ ಯೋಜನೆ ಅಡಿ ರಾಷ್ಟ್ರೀಯ ಮಂಡಳಿ ಸ್ಥಾಪನೆ ಪ್ರಸ್ತಾಪ

* ಪ್ರಧಾನಮಂತ್ರಿ ಕರ್ಮಯೋಗಿ ಮನ್ ಧನ್ ಯೋಜನೆ ಅಡಿ ವಾರ್ಷಿಕ 1.5 ಕೋಟಿ ರೂ.ಗಳಿಗಿಂತಲೂ ಕಡಿಮೆ ವಹಿವಾಟು ಹೊಂದಿರುವ ಸುಮಾರು 3 ಕೋಟಿ ಚಿಲ್ಲರೆ ವರ್ತಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ ವಿಸ್ತರಣೆ.

* ನವೋದ್ಯಮಿಗಳಿಗಾಗಿ ವಿಶೇಷವಾಗಿ ಟೆಲಿಷನ್ ಚಾನೆಲ್ ಆರಂಭಿಸಲು ಸರ್ಕಾರ ಪ್ರಸ್ತಾವನೆ.

* ಕಾರ್ಮಿಕರ ಕೊರತೆ ನಿಭಾಯಿಸಲು ಕೇಂದ್ರ ಸರ್ಕಾರ ಅನ್ವೇಷಣಾತ್ಮಕ ಯೋಜನೆ.

* ಕೃತಕ ಬುದ್ದಿಮತ್ತೆ(ಎಐ), ರೋಬೊಟಿಕ್ಸ್ ಮತ್ತು 3-ಡಿ ಪ್ರಿಂಟಿಂಗ್ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಕೌಶಲ್ಯ ತರಬೇತಿ.

* ಕೇಂದ್ರ ಸರ್ಕಾರದ ನವೋದ್ಯಮ ಯೋಜನೆಯಿಂದಾಗಿ ಎರಡು ವರ್ಷಗಳಲ್ಲಿ 300ಕ್ಕೂ ಹೆಚ್ಚು ಯಶಸ್ವಿ ಉದ್ಯಮಿಗಳು ಹೊರಹೊಮ್ಮಿದ್ದಾರೆ.

* 35 ಕೋಟಿ ಎಲ್‍ಇಡಿ ಬಲ್ಬ್‍ಗಳ ವಿತರಣೆಯಿಂದಾಗಿ ಸರ್ಕಾರಕ್ಕೆ ವಾರ್ಷಿಕವಾಗಿ 18,341 ಕೋಟಿ ರೂ.ಗಳ ಉಳಿತಾಯ.

* ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಉತ್ತೇಜನ ನೀಡಲು ಮತ್ತು ಅನುವು ಮಾಡಿಕೊಡಲು ಮೌಲ್ಯಮಾಪನ ಮತ್ತು ಸಲಹೆಗಳಿಗಾಗಿ ಸಮಿತಿ ರಚನೆ ಪ್ರಸ್ತಾವನೆ.

* ದೇಶದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮತ್ತು ಹಣಕಾಸು ನೆರವು ಪೂರೈಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲು ಪ್ರಸ್ತಾವನೆ.

*ಭಾರತಕ್ಕೆ ಬಂದ ನಂತರ ಸರಳ ವಿಧಾನಗಳ ಮೂಲಕ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್‍ಗಳ ವಿತರಣೆ.

* ದೇಶದ ಎಲ್ಲ ಜಿಲ್ಲೆಗಳಲ್ಲೂ ಸ್ವ-ಸಹಾಯ ಗುಂಪುಗಳ (ಎಸ್‍ಎಚ್‍ಜಿ) ವಿಸ್ತರಣೆ.

* ಮುದ್ರಾ ಯೋಜನೆ ಅಡಿ ಪ್ರತಿ ಎಸ್‍ಎಚ್‍ಜಿಯಲ್ಲಿನ ಓರ್ವ ಮಹಿಳೆಗೆ 1 ಲಕ್ಷ ರೂ.ಗಳವರೆಗೆ ಸಾಲ ನೀಡಿಕೆ.

* ಜಾಗತಿಕ ಮಾರುಕಟ್ಟೆಯಲ್ಲಿ ಸಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಸೃಜನಾತ್ಮಕ ವ್ಯಕ್ತಿಗಳಿಗಾಗಿ ನೆರವು ನೀಡಲು ಹೊಸ ಅಭಿಯಾನ ಯೋಜನೆ ಆರಂಭ.

* ಭಾರತದಲ್ಲಿ ದೇಶ ವಿದೇಶಗಳ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು 17 ಹೆಗ್ಗುರುತು ತಾಣಗಳ ನಿರ್ಮಾಣ.

* ಬ್ಯಾಂಕ್‍ಗಳಲ್ಲಿ ಸಾಲ ವಸೂಲಾತಿಯನ್ನು ಚುರುಕುಗೊಳಿಸಲಾಗಿದ್ದು, ಕಳೆದ ವರ್ಷ ಎನ್‍ಪಿಎ (ವಸೂಲಾಗದ ಸಾಲ) 1 ಲಕ್ಷ ಕೋಟಿ ರೂ.ಗಳಷ್ಟು ಇಳಿಕೆಯಾಗಿದೆ.

* ಸಾಲ ವಿಸ್ತರಣೆಗೆ ಉತ್ತೇಜನ ನೀಡಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70,000 ಕೋಟಿ ರೂ. ಬಂಡವಾಳ ಒದಗಿಸಲಾಗುವದು.

* ಬ್ಯಾಂಕ್ ಅಕೌಂಟ್‍ದಾರರ ಗಮನಕ್ಕೆ ಬರದಂತೆ ನಗದು ಠೇವಣಿ ಇಡುವ ಅಕ್ರಮಗಳನ್ನು ತಡೆಗಟ್ಟಲು ಕಠಿಣ ಕ್ರಮ.

* ಮೂಲಸೌಕರ್ಯಾಭಿವೃದ್ಧಿಗಾಗಿ ಹಣಕಾಸು ನೀಡಿಕೆ ಕುರಿತು ಶಿಫಾರಸ್ಸುಗಳನ್ನು ಮಾಡಲು ತಜ್ಞರ ಸಮಿತಿ ರಚನೆ

* ಪ್ರಮುಖ ಖಾಸಗಿ ಸಂಸ್ಥೆಗಳ ಷೇರು ಕ್ರಯಕ್ಕೆ ಕ್ರಮ

* ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಖಾಸಗೀಕರಣಕ್ಕೆ ಕ್ರಮ

* ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1.05 ಕೋಟಿ ರೂ.ಗಳ ಷೇರು ಕ್ರಯ ಗುರಿ.

* ತೆರಿಗೆ ಆಡಳಿತ ಸರಳೀಕರಣ ಮತ್ತು ಪಾರದರ್ಶಕತೆಗೆ ಒತ್ತು.

* ಭಾರತದಲ್ಲಿ ತಯಾರಾಗದ ರಕ್ಷಣಾ ಸಾಮಗ್ರಿಗಳು ಹೊರ ದೇಶದಿಂದ ಆಮದು.ಗಾಂವ್, ಕಿಸಾನ್, ಗರೀಬ್

ಗ್ರಾಮ್ ಸ್ವರಾಜ್ ಕಲ್ಪನೆಯ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವದು. ಗಾಂವ್ (ಹಳ್ಳಿ), ಕಿಸಾನ್ (ರೈತ), ಗರೀಬ್ (ಬಡವ) ಕೇಂದ್ರದ ಯೋಜನೆಗಳ ಕೇಂದ್ರ ಬಿಂದುವಾಗಲಿದೆ. ಸಣ್ಣ ಉದ್ಯೋಗಿಗಳಿಗೆ 59 ಸೆಕೆಂಡ್‍ಗಳಲ್ಲಿ ಸಾಲ ನೀಡುವ ವ್ಯವಸ್ಥೆ. ಪ್ರತಿಯೊಬ್ಬರಿಗೂ ಗೃಹ ನಿರ್ಮಾಣ. ವಿಮೆ ಕ್ಷೇತ್ರದಲ್ಲಿ ಶೇ. 100 ರಷ್ಟು ಎಫ್‍ಡಿಐ ಹೂಡಿಕೆಗೆ ಅನುಮತಿ. ಸ್ಪೇಸ್ ಇಂಡಿಯಾ ಲಿಮಿಟೆಡ್ ಬಾಹ್ಯಾಕಾಶದ ಕ್ಷೇತ್ರದಲ್ಲಿ ಭಾರತವು ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಈ ಶಕ್ತಿಯನ್ನು ವಾಣಿಜ್ಜೀಕರಣವಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಹೊಸ ಸ್ಪೇಸ್ ಇಂಡಿಯಾ ಲಿಮಿಟೆಡ್‍ನ್ನು ಸಾರ್ವಜನಿಕ ವಿಭಾಗದ ಸಂಸ್ಥೆಯನ್ನು ಸ್ಥಾಪಿಸಲಾಗುವದು. ಗ್ರಾಮೀಣ ಕುಟುಂಬಗಳಿಗೆ ಸೌಲಭ್ಯ 2022 ರ ವೇಳೆಗೆ ದೇಶದ ಪ್ರತಿ ಗ್ರಾಮೀಣ ಕುಟುಂಬಕ್ಕೂ ವಿದ್ಯುತ್ ಸೌಲಭ್ಯ. ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತೀ ಮನೆಗೂ ಶೌಚಾಲಯ, ವಿದ್ಯುತ್ ಮತ್ತು ಎಲ್ಪಿಜಿ ಸೌಲಭ್ಯ ಒದಗಿಸಲಾಗುವದು. ಸರ್ವಋತು ಸಾರಿಗೆ ಸೌಲಭ್ಯದಲ್ಲಿ ಗ್ರಾಮಗಳಿಗೆ ಶೇ. 97 ರಷ್ಟು ಸರ್ವಋತು ಸಾರಿಗೆ ಸೌಲಭ್ಯ ಒದಗಿಸಲಾಗುವದು. ಮುಂಬರುವ ಐದು ವರ್ಷದಲ್ಲಿ 25 ಸಾವಿರ ಕಿ . ಮೀ. ರಸ್ತೆ ನಿರ್ಮಾಣ ಕೈಗೊಳ್ಳಲಾಗುವದು. 1.25 ಲಕ್ಷ ಕಿ. ಮೀ. ರಸ್ತೆ ಮೇಲ್ದರ್ಜೆಗೆ ಏರಿಸಲು ನಿರ್ಧಾರ.ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರ 2019ರ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಸಂದರ್ಭ 10 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿದ್ದರು.

1) ಜನ್ ಬಾಗೀದಾರಿ ಮೂಲಕ ಟೀಂ ಇಂಡಿಯಾ ನಿರ್ಮಾಣ

2) ಮಾಲಿನ್ಯ ನಿಯಂತ್ರಣದ ಮೂಲಕ ಹಸಿರು ಭೂತಾಯಿ ಮತ್ತು ನೀಲಿ ನಕ್ಷತ್ರಗಳನ್ನು ಪಡೆಯುವದು.

3) ಡಿಜಿಟಲ್ ಇಂಡಿಯಾವನ್ನು ದೇಶದ ಎಲ್ಲ ಆರ್ಥಿಕ ವರ್ಗಗಳಿಗೂ ತಲಪಿಸುವದು.

4) ಗಗನಯಾನ - ಚಂದ್ರಯಾನ ಮತ್ತು ಇತರ ಅಂತರಿಕ್ಷ ಕಾರ್ಯಕ್ರಮಗಳ ಅನುಷ್ಠಾನ.

5) ಸಾಮಾಜಿಕ ಹಾಗೂ ದೈಹಿಕ ಮೂಲ ಸೌಕರ್ಯ ನಿರ್ಮಾಣ

6) ನೀರು ನಿರ್ವಹಣೆ ಸ್ವಚ್ಛ ನದಿ ಆಂದೋಲನ

7) ನೀಲ ಆರ್ಥಿಕ ವ್ಯವಸ್ಥೆ

8) ಆಹಾರ ಧಾನ್ಯಗಳು, ಎಣ್ಣೆ ಬೀಜ - ಹಣ್ಣು ಮತ್ತು ತರಕಾರಿಗಳು, ಸ್ವಂತ ಬಳಕೆ ಹಾಗೂ ರಫ್ತುಗೆ ಬೇಕಾಗುವಷ್ಟು ಉತ್ಪಾದನೆ

9) ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯಕರ ಸಮಾಜ, ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಒತ್ತು ಹಾಗೂ ಜನಸಾಮಾನ್ಯರ ರಕ್ಷಣೆಗೆ ಕ್ರಮ

10) ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಸ್ಟಾರ್ಟ್ ಅಫ್, ಒSಊಇ ಗಳು ವಾಹನ, ಇಲೆಕ್ಟ್ರಾನಿಕ್ಸ್, ಬ್ಯಾಟರೀನ್ ಮತ್ತು ವೈದ್ಯಕೀಯ ಉಪಕರಣ ತಯಾರಿಕೆಗೆ ಒತ್ತು.

ಒಟ್ಟು 5 ಟ್ರಿಲಿಯನ್ ಡಾಲರ್ ಎಕಾನಮಿ!ಟ್ರಿಲಿಯನ್ ಆರ್ಥಿಕತೆ ಯೋಜನೆ

ಭಾರತದ ಆರ್ಥಿಕತೆಯು ಶರವೇಗದಲ್ಲಿ ಬೆಳೆಯುತ್ತಿದ್ದು, ಐದು ವರ್ಷಗಳ ಹಿಂದೆ ಜಾಗತಿಕವಾಗಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಆದರೆ ಪ್ರಸ್ತುತ 5ನೇ ಸ್ಥಾನದಲ್ಲಿದೆ. ಭಾರತವು ಪ್ರಸ್ತುತ ವರ್ಷದಲ್ಲಿಯೇ 3 ಟ್ರಿಲಿಯನ್ ದೇಶವಾಗಲಿದೆ. 5 ಟ್ರಿಲಿಯನ್ ಆರ್ಥಿಕತೆಗೆ ಯೋಜನೆ ರೂಪಿಸಲಾಗಿದೆ. ಉಡಾನ್ ಯೋಜನೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಇಂಡಸ್ಟ್ರಿಯಲ್ ಕಾರಿಡಾರ್, ಉಡಾನ್ ಸೇರಿದಂತೆ ರೈಲ್ವೆ ಸಂಪರ್ಕ ಕ್ರಾಂತಿ ಆರ್ಥಿಕತೆಗೆ ಉತ್ತೇಜ ನೀಡಿದೆ. ಮೂಲಸೌಕರ್ಯ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉಜ್ವಲ, ಮುದ್ರಾ ಯೋಜನೆಯಿಂದ ಮಹಿಳೆಯರು ಹೊಗೆ ಮುಕ್ತರಾಗಿದ್ದಾರೆ. ಮುದ್ರಾ ಯೋಜನೆಯ ಫಲವಾಗಿ ಜನಸಾಮಾನ್ಯರ ಜೀವನದಲ್ಲಿ ಮಹತ್ತರ ಬದಲಾವಣೆಯಾಗಿದೆ. ಮೆಟ್ರೋ ಯೋಜನೆ, ರಸ್ತೆಗಳ ಅಭಿವೃದ್ಧಿ ಸುಮಾರು 300 ಕಿ.ಮೀ ಮೆಟ್ರೋ ಯೋಜನೆಗೆ ಅನುಮೋದನೆ ಸಿಕ್ಕಿದೆ. ಭಾರತಮಾಲಾ , ಸಾಗರ್ ಮಾಲಾ ಯೋಜನೆಗಳ ಮೂಲ ರಸ್ತೆಗಳ ಅಭಿವೃದ್ಧಿ ನಡೆಯಲಿದೆ. ವಿಶೇಷ ಆರ್ಥಿಕ ವಲಯಗಳ ಮೂಲಕ ಅಂತರ್ರಾಷ್ಟ್ರೀಯ ಉದ್ಯಮದಾರರಿಗೆ ಅವಕಾಶ. ಗಂಗಾನದಿಯಲ್ಲಿ ಒಳನಾಡು ಸಾರಿಗೆಗೆ ಆದ್ಯತೆ ಮೂಲಕ ಜಲ ಮಾರ್ಗ ಯೋಜನೆಗೆ ಒತ್ತು ನೀಡಲಾಗುವದು. ಸಾಂಪ್ರದಾಯಿಕ ಉದ್ಯಮಕ್ಕೆ ಉತ್ತೇಜನ

ಕೇಂದ್ರ ಸರ್ಕಾರ ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ ಕೈಗೊಂಡಿದ್ದು, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ. ಇಲ್ಲಿ ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು ನೀಡಲಾಗುವದು. ಶೂನ್ಯ ಬಂಡವಾಳ ಕೃಷಿ ಪ್ರಮುಖ ಆದ್ಯತೆ ವಲಯವಾಗಿದ್ದು, ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು. ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗಾಗಿ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪನೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 81 ಲಕ್ಷ ಮನೆಗಳ ನಿರ್ಮಾಣ ಮಾಡಲಾಗುವದು. ಈಗಾಗಲೇ 26 ಲಕ್ಷ ಮನೆಗಳು ನಿರ್ಮಾಣವಾಗಿದ್ದು, 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ ಸಿಗಲಿದೆ. ಸ್ವಚ್ಛ ಭಾರತ್ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ. ಜಲ ಜೀವನ ಮಿಷನ್ ಯೋಜನೆ ಹೆಚ್ಚಿನ ರಾಜ್ಯಗಳು ಜಲದ ಕ್ಷಾಮ ಮತ್ತು ಬರದಿಂದ ತತ್ತರಿಸಿವೆ. ಮಳೆ ಕೊಯ್ಲು ಅಂತರ ಹೆಚ್ಚಿಸಲು ಜಲ ಜೀವನ ಮಿಷನ್ ಯೋಜನೆ ತರಲು ನಿರ್ಧರಿಸಲಾಗಿದೆ. ಜಲ ಶಕ್ತಿ ಸಚಿವಾಲಯ ಸ್ಥಾಪನೆ ಕೇಂದ್ರ ಸರ್ಕಾರವು ಜಲ ಶಕ್ತಿ ಸಚಿವಾಲಯ ಸ್ಥಾಪನೆ ಮಾಡಲು ನಿರ್ಧರಿಸಿದ್ದು, ಕುಡಿಯುವ ನೀರು, ಜಲ ಸಂವರ್ಧನೆ ಯೋಜನೆಗೆ ಮೊದಲ ಆಧ್ಯತೆ. ಹರ್ ಘರ್ ಜಲ್ ಯೋಜನೆ ಜಾರಿ ಮಾಡಲಾಗುವದು. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುವದು. ಯುವಕರಿಗೆ ಆದ್ಯತೆ

10 ಲಕ್ಷ ಯುವಕರಿಗೆ ಕೌಲಶ್ಯ ಅಭಿವೃದ್ಧಿ ತರಬೇತಿ ಒದಗಿಸಲಾಗುವದು. 3ಡಿ ಪ್ರಿಂಟಿಂಗ್ ಅಧ್ಯಯನಕ್ಕಾಗಿ ಯುವಕರಿಗೆ ನೆರವು ನೀಡಲಾಗುವದು. �?