ವೀರಾಜಪೇಟೆ, ಜು. 5: ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಬಿ.ಎಸ್ಸಿ. ಕೋರ್ಸನ್ನು ಪ್ರಾರಂಭಿಸಲಾಗಿದೆ.

ಪ್ರಸ್ತುತ ಕಾಲೇಜಿನಲ್ಲಿ ಬಿ.ಕಾಂ, ಬಿ.ಸಿ.ಎ. ಬಿ.ಬಿ.ಎ. ಕೋರ್ಸ್‍ಗಳೊಂದಿಗೆ ಬಿ.ಎಸ್ಸಿ.ಯು ಪಿ.ಸಿ.ಎಂ. ವಿಷಯಗಳೊಂದಿಗೆ ಪ್ರಾರಂಭವಾಗಿದೆ. ನುರಿತ ಉಪನ್ಯಾಸಕರನ್ನು ಒಳಗೊಂಡ ಸುಸಜ್ಜಿತ ಲ್ಯಾಬುಗಳು ಮತ್ತು ತರಗತಿಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ. ಭೋದನಾ ಕಾರ್ಯ ಮತ್ತು ಕೌಶಲ್ಯ ವೃದ್ಧಿಸುವ ತರಬೇತಿಯನ್ನು ನೀಡಲಾಗುತ್ತದೆ.

ಪ್ರವೇಶಾತಿಯು ಲಭ್ಯವಿದ್ದು ವಿದ್ಯಾರ್ಥಿಗಳು ಅರ್ಜಿಯನ್ನು ಕಚೇರಿಯಿಂದ ಪಡೆದು ಪ್ರವೇಶವನ್ನು ಪಡೆಯಬಹುದು ಎಂದು ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.