ಗುಡ್ಡೆಹೊಸೂರು, ಜು. 5: ಇಲ್ಲಿನ ಗ್ರಾ.ಪಂ. ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕಪರಿಶೋಧನಾ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸಮುದಾಯಭವನದಲ್ಲಿ ನಡೆಯಿತು.

ಸಭೆಯಲ್ಲಿ ತಾ.ಪಂ. ಸದಸ್ಯೆ ಪುಷ್ಪ ಮತ್ತು ನೋಡಲ್ ಅಧಿಕಾರಿ ಕಾವ್ಯ ಉಪಸ್ಥಿತರಿದ್ದು ವಿಷಯಗಳ ಬಗ್ಗೆ ಮಹಿತಿ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕಪರಿಶೋಧನಾ ಅಧಿಕಾರಿ ಪ್ರೀತಂ ಸಭೆಯಲ್ಲಿ ಈ ಯೋಜನೆಯಲ್ಲಿ ಸಾರ್ವಜನಿಕರಿಗೆ ಇರುವ ಸವಲತ್ತುಗಳ ಬಗ್ಗೆ ವಿವರಿಸಿದರು. ಕಳೆದ ಬಾರಿ ಗ್ರಾ.ಪಂ. ವತಿಯಿಂದ ನಡೆದ ಮನೆ ಕಾಮಗಾರಿ ಮತ್ತು ರಸ್ತೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥರ ಪರವಾಗಿ ಪ್ರಮುಖ ಬಿ.ಎಸ್. ಧನಪಾಲ್ ಮತ್ತು ವಿಶುಕುಮಾರ್ ಚರ್ಚೆಯನ್ನು ನಡೆಸಿದರು. ಅಂಚೆ ಇಲಾಖೆ ಪಿಂಚಣಿದಾರರಾಗಿರುವ ವಯಸ್ಕರಿಗೆ, ಅಂಗವಿಕಲರಿಗೆ ಸ್ಪಂದನೆ ತೋರುತ್ತಿಲ್ಲ ಎಂದು ನಾಗರಿಕರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಪಿ.ಡಿ.ಓ. ಶ್ಯಾಂ ಮತ್ತು ಕಾರ್ಯದರ್ಶಿ ನಂಜುಂಡೇಸ್ವಾಮಿ ಉಪಸ್ಥಿತರಿದ್ದರು.