ನಾಪೋಕ್ಲು, ಜು. 5: ಕೆದಮುಳ್ಳೂರು ಸಮೀಪದ ಹೆಗ್ಗಳ ಗ್ರಾಮದ ಕೊಟ್ಟಚ್ಚಿ ಎಂಬಲ್ಲಿ ಕಾಡಾನೆಗಳ ದಾಳಿಯಿಂದ ಬಾಳೆತೋಟ ಬಾರಿ ನಷ್ಟ ಸಂಭವಿಸಿದೆ. ಇಲ್ಲಿನ ರೈತ ಪೊಕ್ಕೊಳಂಡ್ರ ಗಣಪತಿ ಸೇರಿದಂತೆ ಹಲವರ ತೋಟಗಳಿಗೆ ಮೂರು ಮರಿಯಾನೆ ಸೇರಿದಂತೆ ಹದಿನೈದು ಆನೆಗಳ ಹಿಂಡು ದಾಳಿ ಮಾಡಿದ್ದು, ಕಾಫಿ ತೋಟಗಳನ್ನು ಹಾಳುಗೆಡವಿದೆ. ಸುಮಾರು ಇನ್ನೂರು ನೇಂದ್ರ ಬಾಳೆಯ ಗಿಡಗಳು ಕಾಡಾನೆಗಳ ಧಾಳಿಗೆ ತುತ್ತಾಗಿವೆ. ಇವುಗಳಲ್ಲಿ 150ಕ್ಕೂ ಅಧಿಕ ಬಾಳೆಗಿಡಗಳಲ್ಲಿ ಗೊನೆಗಳಾಗಿದ್ದವು.ವ್ಯವಸ್ಥಿತವಾಗಿ ನೇಂದ್ರ ಬಾಳೆಯ ಕೃಷಿ ಕೈಗೊಂಡಿದ್ದು ಆನೆ ದಾಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.