ಗೋಣಿಕೊಪ್ಪ ವರದಿ, ಜು. 4: ಸೇನೆಯಲ್ಲಿ ನಿವೃತ್ತಿ ಹೊಂದಿದ ಯೋಧ ಹೆಚ್.ಕೆ. ಕೇಶವ್ ಅವರನ್ನು ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸುವ ಮೂಲಕ ಗ್ರಾಮಕ್ಕೆ ಸ್ವಾಗತಿಸಿಕೊಂಡರು.

ಈ ಸಂದÀರ್ಭ ಮಾತನಾಡಿದ ಯೋಧ ಕೇಶವ್, ಮುಂದಿನ ದಿನಗಳಲ್ಲಿ ಯುವ ಸಮೂಹವನ್ನು ಸೇನೆಗೆ ಸೇರಿಸಲು ಒಂದಷ್ಟು ಯೋಜನೆ ರೂಪಿಸುವ ಚಿಂತನೆಯ ಲ್ಲಿದ್ದೇನೆ. ಆ ಮೂಲಕ ನಿವೃತ್ತಿ ನಂತರವೂ ದೇಶಕ್ಕೆ ನನ್ನ ಕಾಣಿಕೆ ನೀಡುತ್ತೇನೆ. ಗ್ರಾಮಸ್ಥ ರೊಂದಿಗೆ ಕೈಜೋಡಿಸಿ ದೇಶ ರಕ್ಷಣೆಗೆ ಯುವ ಸಮೂಹ ಮುಂದಾಗಬೇಕಿದೆ ಎಂದರು. ಅಮ್ಮತ್ತಿ ಸ್ನೇಹಿತರ ಬಳಗದ ಅಧ್ಯಕ್ಷ ಅಭಿಜಿತ್, ಕಾರ್ಯದರ್ಶಿ ರದೀಶ್, ಉಪಾಧ್ಯಕ್ಷ ಆಸೀಫ್, ಜಂಟಿ ಕಾರ್ಯದರ್ಶಿ ಗ್ಲಾಡ್ವಿನ್, ಯೋಧ ಕೇಶವ್ ಪತ್ನಿ ಜಯ ಇದ್ದರು.

-ಸುದ್ದಿಪುತ್ರ