ಶನಿವಾರಸಂತೆ, ಜು. 4: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರಸಂತೆ ವ್ಯಾಪ್ತಿಯ ದಲಿತ ಮುಖಂಡರ ಸಭೆಯನ್ನು ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ವಹಿಸಿದ್ದರು. ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ದಲಿತ ಮುಖಂಡರೊಂದಿಗೆ ಕುಂದು ಕೊರತೆಗಳನ್ನು ಆಲಿಸಿದರು.

ಸಭೆಯಲ್ಲಿ ಸಹಾಯಕ ಠಾಣಾಧಿಕಾರಿಗಳಾದ ಹೆಚ್.ಎಂ. ಗೋವಿಂದ್, ಗೋವಿಂದರಾಜ್, ಸಿಬ್ಬಂದಿಗಳಾದ ನಾಯಕ್ ಪಾಟೀಲ್, ಈರಪ್ಪ, ರಘು ಉಪಸ್ಥಿತರಿದ್ದರು. ಗೋವಿಂದ್ ಸ್ವಾಗತಿಸಿ, ವಂದಿಸಿದರು.