ಕೂಡಿಗೆ, ಜು. 4: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ವ್ಯಾಪ್ತಿಯ ಸೀತಾ ಕಾಲೋನಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.

ಕಳೆದ ಎರಡು ದಿನಗಳಿಂದ 4 ಕಾಡಾನೆಗಳ ಹಿಂಡು, ಈ ವ್ಯಾಪ್ತಿಯ ರೈತರ ಜಮೀನುಗಳಿಗೆ ನುಗ್ಗಿ ದಾಳಿ ಮಾಡಿದ್ದು, ಇದರಿಂದ ಬೆಳೆ ನಷ್ಟ ಸಂಭವಿಸಿದೆ. ಗ್ರಾಮದ ರವಿ, ಪ್ರಸನ್ನ, ಅಪ್ಪಯ್ಯ, ರಘು ಎಂಬವರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಶುಂಠಿ, ಕೇನೆ, ಅಡಿಕೆ ಮರಗಳನ್ನು ತುಳಿದು ನಾಶಮಾಡಿವೆ. ಅರಣ್ಯ ಇಲಾಖೆ ಸ್ಥಳ ಪರಿಶೀಲಿಸಿ, ಪರಿಹಾರ ಒದಗಿಸುವದರ ಜೊತೆಗೆ ಕಾಡಾನೆಗಳನ್ನು ಇಲ್ಲಿನ ಬೆಂಡೆಬೆಟ್ಟದ ಕಡೆ ಓಡಿಸಬೇಕೆÉಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.