ಸುಂಟಿಕೊಪ್ಪ, ಜು. 4: ಸರಕು ಸಾಗಾಣಿಕೆ ವಾಹನದಲ್ಲಿ ಜನ ಸಾಗಾಟ ಮಾಡುತ್ತಿದ್ದ 2 ವಾಹನಗಳನ್ನು ಸುಂಟಿಕೊಪ್ಪ ಪೊಲೀಸರು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ್ದಾರೆ.

ಸುಂಟಿಕೊಪ್ಪ ಪಟ್ಟಣದಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಪಿಕ್ ಆಪ್ ಮತ್ತು ಟಾಟಾ ಎಸಿ ವಾಹನಗಳನ್ನು ಪಿಎಸ್‍ಐ ಜಯರಾಮ್ ನೇತೃತ್ವದ ಪೊಲೀಸರು ವಶಕ್ಕೆ ಪಡೆದು ದಾಖಲಾತಿಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸ್‍ಐ ಗಣೇಶ್, ಸಿಬ್ಬಂದಿಗಳಾದ ರವಿ, ಪುನಿತ್ ಕುಮಾರ್, ಹರೀಶ್ ಇತರರು ಇದ್ದರು.