ಸಿದ್ದಾಪುರ, ಜು. 4: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ 2018-19ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮಸಭೆ ಗ್ರಾ.ಪಂ. ಸಭಾಂಗಣದಲ್ಲಿ ನೋಡಲ್ ಅಧಿಕಾರಿ ಡಾ. ಸಂಜೀವ್‍ಕುಮಾರ್ ಶಿಂಧೆ ಸಮ್ಮುಖದಲ್ಲಿ ನಡೆಯಿತು.

ಸಭೆಯಲ್ಲಿ 2018-19ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯ ಲೆಕ್ಕ ಪರಿಶೋಧನೆ ಹಾಗೂ ವರದಿ ಮಂಡಿಸಿ, ಅಂಗೀಕರಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ ಮಹಮ್ಮದ್, ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧಕ ಅಬ್ದುಲ್ ಸಲಾಂ, ಪಿ.ಡಿ.ಓ. ಚಂದ್ರಶೇಖರ್, ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.