ಶನಿವಾರಸಂತೆ, ಜು. 4: ಹಾಸನ ಜಿಲ್ಲೆಯ ಹರಿಹಳ್ಳ ಗ್ರಾಮದ ಟ್ರ್ಯಾಕ್ಟರ್ ಚಾಲಕನ ಮೋಟಾರ್ ಸೈಕಲ್ (ಕೆಎ 46 ಹೆಚ್ 6522) ಕೊಡ್ಲಿಪೇಟೆ ಕೆರಗನಹಳ್ಳಿಯ ಪೆಟ್ರೋಲ್ ಬಂಕ್ ಹತ್ತಿರ ಜೂನ್ 28 ರಂದು ನಿಲ್ಲಿಸಿದ್ದು ಕಾಣೆಯಾಗಿತ್ತು. ಈ ಬಗ್ಗೆ ದೊರೆತ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹರಿಹಳ್ಳಿ ಗ್ರಾಮದ ಬಿ.ಆರ್. ಮೋಹನ್ ಟ್ರ್ಯಾಕ್ಟರ್ ಚಾಲಕನಾಗಿದ್ದು, ಪ್ರತಿದಿನ ತನ್ನ ಮೋಟಾರ್ ಸೈಕಲ್ನಲ್ಲಿ ಕೊಡ್ಲಿಪೇಟೆಯ ಕೆರಗನಹಳ್ಳಿಗೆ ಬಂದು ಪೆಟ್ರೋಲ್ ಬಂಕ್ ಹತ್ತಿರ ಮೋಟಾರ್ ಸೈಕಲ್ ನಿಲ್ಲಿಸಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ.
ಪೊಲೀಸರ ತನಿಖೆಯಿಂದ ಗೋಪಾಲಪುರ ಗ್ರಾಮದ ಒಡೆಯನಪುರ ಗ್ರಾಮದ ಅಬ್ದುಲ್ ಅವರ ಪುತ್ರ ಮಹ್ಮದ್ ಜುನೈದ್ ಎಂಬಾತನನ್ನು ಬಂಧಿಸಿ, ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಪೊಲೀಸರು ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.