ವೀರಾಜಪೇಟೆ, ಜು. 3: ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಪ್ರಕೃತಿ ವಿಕೋಪದಲ್ಲಿ ಸಾರ್ವಜನಿಕರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ ಹಿನೆÀ್ನಲೆ ಈ ಬಾರಿ ಮುಂಜಾಗ್ರತೆ ಕ್ರಮವಾಗಿ ಎನ್‍ಡಿಆರ್‍ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ವೀರಾಜಪೇಟೆ ತಾಲೂಕಿನ ಮಾಕುಟ್ಟ, ಕರಡಿಗೋಡು, ಇಲ್ಲಿನ ನೆಹರುನಗರ, ಅರಸುನಗರ, ಅಯ್ಯಪ್ಪಬೆಟ್ಟ ಪ್ರದೇಶವನ್ನು ಪರೀಶಿಲನೆ ನಡೆಸಿದರು. ತಂಡದಲ್ಲಿ ಒಟ್ಟು 30 ಸದಸ್ಯರಿದ್ದು ಕಮಾಂಡರ್ ಕೆ.ಪಿ. ಚೌದರಿ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಪ್ರಕೃತಿ ವಿಕೋಪ ಉಂಟಾಗಿ ಸಾರ್ವಜನಿಕರಿಗೆ ಏನಾದರು ತೊಂದರೆ ಉಂಟಾದಲ್ಲಿ ಪಟ್ಟಣದ ಹೆಲ್ಪ್‍ಲೈನ್ 08274-257332, ಅಥವಾ 8639685630 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಬಹುದಾಗಿದೆ. ಎನ್‍ಡಿಆರ್‍ಎಫ್ ತಂಡ ವೀರಾಜ ಪೇಟೆ ಭೇಟಿಯ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕ ಪಳಂಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಹಾಜರಿದ್ದು ಪ್ರಕೃತಿ ವಿಕೋಪದ ಸ್ಥಳಗಳ ಕುರಿತು ಮಾಹಿತಿ ನೀಡಿದರು. ಮಳೆಗಾಲ ಮುಗಿಯುವ ತನಕ ಈ ಎನ್‍ಡಿಆರ್‍ಎಫ್ ತಂಡ ಕೊಡಗಿನಲ್ಲಿ ಶಿಬಿರ ಹೂಡಲಿದೆ.