ಮಡಿಕೇರಿ, ಜು. 3: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವನ್ನು ಪುನರ್ ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಸೇರಿದಂತೆ ಹಿರಿಯರ ಸಲಹೆ, ಸೂಚನೆಗಳನ್ನು ಈಗಾಗಲೇ ಪಡೆದಿದ್ದು, ಇನ್ನು ಮುಂದೆಯೂ ಇವರುಗಳ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲಿದ್ದೇವೆ ಎಂದು ನೂತನ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಎ.ಕೆ. ಹ್ಯಾರೀಸ್ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ನೂತನ ಉಪಾಧ್ಯಕ್ಷರುಗಳಾಗಿ ಟಿ.ಐ. ಯಜಾಝ್, ಶೀಲಾ ಡಿಸೋಜ, ಕೆ.ಎ. ಮೊಹಮ್ಮದ್ ಹಾಜಿ, ಕೆ.ವಿ. ಪೌಲಸ್, ಹೆಚ್.ಎಂ. ಅಬ್ಬಾಸ್, ಎ.ಎಂ. ಉಮ್ಮರ್, ಅಬ್ದುಲ್ ವಹಿದ್ ಅಸ್ನಾರ್, ಎಂ.ಎಂ. ಅಮೀನ, ಪಿ.ಜೆ. ಜಸ್ಟಿನ್ ಪಿ.ಎ. ಮುನೀರ್, ಎಂ.ಐ. ಮೊಹಮ್ಮದ್ ಖುರೇಷಿ, ಮರಿಯ ಜಸ್ಟೀನ್ ವಾಸ್ ಆಯ್ಕೆಯಾಗಿದ್ದಾರೆ.
ಸಂಯೋಜಕರುಗಳಾಗಿ ಎಂ.ವಿ. ಮೊಹಮ್ಮದ್, ಕೆ.ಎಸ್. ಶಿಹಾಬ್, ಎನ್.ಎಂ. ಅಬ್ದುಲ್ ಅಜೀಝ್, ಎಂ.ವಿ. ವಿನು, ಎಂ.ಎ. ರಫೀಕ್, ಎನ್.ಇ. ಅಬ್ದುಲ್ ಲತೀಫ್, ತೆರೆಸಾ ವಿಕ್ಟರ್, ಎಂ.ಎ. ಅತಾವುಲ್ಲ, ಎಂ.ಎ. ಅಬೂಬಕ್ಕರ್, ವಿ.ಕೆ. ಬಷೀರ್, ಫೈಸಿಯಾ, ಸಾಫಿಯ ಮೊಹಮ್ಮದ್, ಸಿ.ಎ. ಉಸ್ಮಾನ್, ಅಫ್ರೋಸ್, ಟಿ.ಎಂ. ಅಬ್ದುಲ್ ಖಾದರ್, ಕೆ.ಎಂ. ರಜಾಕ್, ಎಂ.ಇ. ಇಬ್ರಾಹಿಂ, ಅಬ್ದುಲ್ ಖಾದರ್, ಅಹಮ್ಮದ್, ಸಿ.ಕೆ. ಅಶ್ರಫ್, ಎಂ. ಅಝೀಜ್, ಐ.ಹೆಚ್. ಹನೀಫ್, ಬಿ.ಎ. ಅಬ್ದುಲ್ಲ, ಸಯ್ಯದ್ ಅಲವಿ, ಕೆ.ಎ. ರಶೀದ್, ಕೆ.ಎ. ಅಬ್ದುಲ್ ಖಾದರ್, ಅಬ್ದುಲ್ ಲತೀಫ್, ಕೆ.ಎಂ. ಶೌಕತ್ ಆಲಿ ಆಯ್ಕೆಯಾಗಿದ್ದಾರೆ.
ಬ್ಲಾಕ್ ಅಧ್ಯಕ್ಷರುಗಳಾಗಿ ಮೊಹಮ್ಮದ್ ರಫೀಕ್, ಅಲೀರ ರಶೀದ್, ಸಿ.ಇ. ಸುಬೀರ್, ಕೆ.ಇ. ಮ್ಯಾಥ್ಯು, ಶಾಹಿದ್ ಖಾನ್, ಅಬ್ದುಲ್ ರಜಾಕ್ ನೇಮಕಗೊಂಡಿದ್ದಾರೆ.