ಗೋಣಿಕೊಪ್ಪ ವರದಿ, ಜೂ. 3: ಕಾಲೇಜು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಅಲುಮಿನಿ ಅಸೋಸಿಯೇಷನ್ ವತಿಯಿಂದ ರೂ. 1.5 ಕೋಟಿ ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ ಹಾಗೂ ಆಡಳಿತ ಕಚೇರಿ ಕಟ್ಟಡ ನಿರ್ಮಿಸಲು ಅಸೋಸಿಯೇಷನ್ ಸಭೆಯಲ್ಲಿ ನಿರ್ಧರಿಸಲಾಯಿತು.
ಕಾಲೇಜು ಆಡಳಿತ ಮಂಡಳಿ ಮನವಿಯಂತೆ ರೂ. 1 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಅನುಕೂಲ ವಾಗುವಂತೆ 50 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಕೋಣೆ ನಿರ್ಮಿಸುವದಾಗಿ ಅಸೋಸಿಯೇಷನ್ ಉಪಾಧ್ಯಕ್ಷ ತಿರುನೆಲ್ಲಿಮಾಡ ಎಂ. ದೇವಯ್ಯ ಪ್ರಕಟಿಸಿದರು. ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸಿ ಕಾಮಗಾರಿ ನಡೆಸುವಂತೆ ನಿರ್ಧರಿಸಲಾಯಿತು. ಸದಸ್ಯತ್ವ ಹೆಚ್ಚಿಸುವ ಮೂಲಕ ಅಸೋಸಿ ಯೇಷನ್ ಬಲಪಡಿಸಲು ನಿರ್ಧರಿಸ ಲಾಯಿತು. ಕಾಲೇಜು ಹಳೆಯ ವಿದ್ಯಾರ್ಥಿಗಳು ಆರ್ಥಿಕ ಸಹಾಯ ಮಾಡಲು ಇಚ್ಚಿಸುವವರು 9448152349, 9448156636 ಸಂಖ್ಯೆಯಲ್ಲಿ ವ್ಯವಹರಿಸಲು ಮನವಿ ಮಾಡಿಕೊಂಡರು. ಈ ಸಂದÀರ್ಭ ನೂತನ ಆಡಳಿತ ಮಂಡಳಿ ರಚಿಸ ಲಾಯಿತು. ಅಧ್ಯಕ್ಷರಾಗಿ ಪ್ರಾಂಶುಪಾಲ ಕುಸುಮಾಧರ್, ಉಪಾಧ್ಯಕ್ಷರಾಗಿ ತಿರುನೆಲ್ಲಿಮಾಡ ಎಂ. ದೇವಯ್ಯ, ಕಾರ್ಯದರ್ಶಿಯಾಗಿ ವಾಣಿ ಚೆಂಗಪ್ಪ, ಖಜಾಂಚಿಯಾಗಿ ಮನು ನಂಜಪ್ಪ, ಸಂಚಾಲಕಿಯಾಗಿ ರಜನಿ, ಆಡಳಿತ ಮಂಡಳಿ ಸದಸ್ಯರಾಗಿ ಸಿ.ಎಂ. ನಾಚಪ್ಪ, ಆಶಾ ಶಂಕರ್, ಪುಳ್ಳಂಗಡ ನಟೇಶ್, ಪಿ.ಬಿ. ಪೂಣಚ್ಚ, ಅನೀಶ್ ಮಾದಪ್ಪ, ಜಯ ಜೋಯಪ್ಪ, ಗಣೇಶ್ ತಿಮ್ಮಯ್ಯ, ಶಂಭು ಬಿದ್ದಪ್ಪ, ನಾಮ ನಿರ್ದೇಶಕ ಸದಸ್ಯರಾಗಿ ಪುಚ್ಚಿಮಾಡ ಸುಭಾಶ್, ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.