ಸೋಮವಾರಪೇಟೆ, ಜು. 3: ತಾಲೂಕು ಪಂಚಾಯಿತಿ, ಕೃಷಿ ಇಲಾಖೆ ಇವುಗಳ ಆಶ್ರಯದಲ್ಲಿ ಆತ್ಮ ಯೋಜನೆಯ ಕುರಿತು ಜನಜಾಗೃತಿ ಬೀದಿ ನಾಟಕ ಖಾಸಗಿ ಬಸ್ ನಿಲ್ದಾಣದಲ್ಲಿ ಕೊಡಗು ವಿದ್ಯಾಸಾಗರ ಕಲಾ ತಂಡದವರಿಂದ ನಡೆಯಿತು.

ಕಾರ್ಯಕ್ರಮಕ್ಕೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಚಾಲನೆ ನೀಡಿದರು. ಆತ್ಮ ಯೋಜನೆಯಲ್ಲಿ ಪಶು ವೈದ್ಯಕೀಯ ಇಲಾಖೆ, ರೇಷ್ಮೆ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಗಳಿದ್ದು, ಸರ್ಕಾರ ಇದರ ಮೂಲಕ ಹಲವು ಯೋಜನೆಗಳನ್ನು ನೀಡುತ್ತಿದ್ದು, ರೈತರು ಸದ್ಬಳಕೆ ಮಾಡಿ ಕೊಳ್ಳಬೇಕೆಂದರು.

ಈ ಸಂದರ್ಭ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಕೃಷಿ ಅಧಿಕಾರಿ ನವ್ಯ ನಾಣಯ್ಯ, ಸಹಾಯಕ ಕೃಷಿ ಅಧಿಕಾರಿ ಕವಿತ, ತಾಂತ್ರಿಕ ವ್ಯವಸ್ಥಾಪಕಿ ಪಲ್ಲವಿ, ಸಹಾಯಕ ವ್ಯವಸ್ಥಾಪಕರಾದ ಬಿ.ಎನ್. ವೇದಪ್ರಿಯ, ಕೊಡಗು ವಿದ್ಯಾಸಾಗರ ಕಲಾ ತಂಡದ ಈ. ರಾಜು ಉಪಸ್ಥಿತರಿದ್ದರು.

ಕಲಾ ತಂಡದ ಸದಸ್ಯರು ಜಾನಪದ ಗೀತೆಗಳ ಮೂಲಕ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ, ಸಮಗ್ರ ಕೃಷಿ ಪದ್ಧತಿ, ಕೀಟ ನಾಶಕಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.