ಕುಶಾಲನಗರ, ಜು. 3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಮುಳ್ಳುಸೋಗೆಯ ಸಮುದಾಯ ಭವನದಲ್ಲಿ ಸೋಲಾರ್ ಆಧಾರಿತ ಸ್ವಉದ್ಯೋಗ ತರಬೇತಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಕೂಡಿಗೆ ಕಾಬ್ಸೆಟ್ ತರಬೇತಿ ಸಂಸ್ಥೆಯ ಉಪನ್ಯಾಸಕ ಸಲಾವುದ್ದಿನ್ ಮತ್ತು ಹರೀಶ್ ಮಾಹಿತಿ ಒದಗಿಸಿದರು.
ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರತಿನಿಧಿ ಶಶಿಕುಮಾರ್ ಮಾತನಾಡಿ, ಯಂತ್ರಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಎಂ.ಎನ್. ಚಂದ್ರಮೋಹನ್ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕಿ ಎನ್.ಗೀತಾ, ಕೂಡಿಗೆ ವಲಯ ಮೇಲ್ವಿಚಾರಕಿ ಕಲಾವತಿ, ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ, ಸೇವಾ ಪ್ರತಿನಿಧಿ ಕುಸುಮ, ಸುವರ್ಣ, ಸಂಗೀತಾ ಮತ್ತಿತರರು ಇದ್ದರು.