ವೀರಾಜಪೇಟೆ, ಜು. 3: ತಾ. 13 ರಂದು ವೀರಾಜಪೇಟೆ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವಿದ್ದು, ಎಲ್ಲಾ ರೀತಿಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿ ಸಲಾಗುತ್ತದೆ. ತಾ. 13 ರವರೆಗೆ ಪ್ರತಿದಿನ ಸಂಧಾನ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ನ್ಯಾಯಾಲಯ ಪ್ರಕಟಣೆ ತಿಳಿಸಿದೆ.