ಚೆಟ್ಟಳ್ಳಿ, ಜು. 3: ಚೆಟ್ಟಳ್ಳಿ ವಿನಾಯಕ ಮನೋರಂಜನಾ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅಧ್ಯಕ್ಷತೆಯಲ್ಲಿ ಮಂಗಳ ಸಭಾಂಗಣದಲ್ಲಿ ನಡೆಯಿತು.
ಹಿಂದಿನ ಸಾಲಿನ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಓದಿ ಅಂಗೀಕರಿಸಲಾಯಿತು. ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ಕೆಚ್ಚೆಟ್ಟಿರ ಡಿಕ್ಕಿ ಅಪ್ಪಯ್ಯ ಹಾಗೂ ಬಲ್ಲಾರಂಡ ಹರೀಶ್ ತಮ್ಮಯ್ಯ ಓದಿ ಅಂಗೀಕರಿಸಲಾಯಿತು. ಸಂತ್ರಸ್ತರಿಗೆ ಸೋಲಾರ್ ದೀಪ ವಿತರಿಸಿದ ಬಗ್ಗೆ, ಸದಸ್ಯರ ಸೇರ್ಪಡೆ, ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ ಮುಳ್ಳಂಡ ರತ್ತು ಚಂಗಪ್ಪ, ದಂಬೆಕೋಡಿ ಹರೀಶ್, ಪುತ್ತರಿರ ಕರುಣ್ ಕಾಳಯ್ಯ, ಪರ್ಲಕೊಟಿ ತಿರುಪತಿ, ಬಲ್ಲಾರಂಡ ನಾಣಯ್ಯ, ಕೊಂಗೇಟಿರ ಲೋಕೇಶ್ ಅಚ್ಚಪ್ಪ, ಮುಳ್ಳಂಡ ರಂಜನ್, ಪೇರಿಯನ ಘನಶ್ಯಾಂ, ಚೋಳಪಂಡ ವಿಜಯ ಅವರನ್ನು ಆಯ್ಕೆ ಮಾಡಲಾಯಿತು.