ಸೋಮವಾರಪೇಟೆ, ಜು. 3: ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು.
1537ರಲ್ಲಿ ಅರಸರಾಗಿದ್ದ ಕೆಂಪೇಗೌಡರು ಬೆಂದಕಾಳೂರು ಪಟ್ಟಣವನ್ನು ಕಟ್ಟಿದ್ದರು. ಈಗ ಬೆಂಗಳೂರು ಜಗತ್ಪ್ರಸಿದ್ದ ನಗರವಾಗಿದೆ. ಅಂತಹ ಮಹಾನ್ ನಾಯಕರು ನಾಡಿಗೆ ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ವಾಣಿಜ್ಯ ವಿಭಾಗದ ಉಪನ್ಯಾಸಕಿ ಅರ್ಪಿತಾ ಹೇಳಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಕುಮಾರ್, ಭವ್ಯ, ಸಹನ, ದೃತಿಕ ಉಪಸ್ಥಿತರಿದ್ದರು.