ವೀರಾಜಪೇಟೆ ಜು. 3: ವೀರಾಜಪೇಟೆ ಲಯನ್ಸ್ ಕ್ಲಬ್ನ ಮುಂದಿನ ಸಾಲಿನ ಹೊಸ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ತಾ. 4 ರಂದು (ಇಂದು) ರಾತ್ರಿ 7ಗಂಟೆಗೆ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.
ಲಯನ್ಸ್ ಗವರ್ನರ್ ಸಿ.ಎ.ಮುತ್ತಣ್ಣ ಅವರು ನೂತನ ಅಧ್ಯಕ್ಷ ಪೌಲ್ ಕ್ಷೇವಿಯರ್ ತಂಡದ ಆಡಳಿತ ಮಂಡಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಲಿದ್ದಾರೆ.