ವೀರಾಜಪೇಟೆ, ಜು. 3: ಕೊಡಗು ಜಿಲ್ಲೆಯ ಅಮ್ಮ ಕೊಡವ ಮಕ್ಕಳಿಗೆ ಅಖಿಲ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದಿಂದ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ವಿತರಿಸಲಾಗುವದು ಎಂದು ಸಂಘದ ಗೌ. ಕಾರ್ಯದರ್ಶಿ ಉಮೇಶ್ ಕೇಚಮ್ಮಯ್ಯ ತಿಳಿಸಿದಾರೆ. ಅರ್ಹ ಏಳನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹೆಸರು, ಅಂಕಪಟ್ಟಿ ವ್ಯಾಸಂಗದ ದೃಢೀಕರಣ ಪತ್ರದೊಂದಿಗೆ ಆಗಸ್ಟ್ 15ರೊಳಗೆ ಪೊನ್ನಂಪೇಟೆಯಲ್ಲಿರುವ ಸಂಘದ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೋ.9480425773 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.