ಮಡಿಕೇರಿ, ಜು. 2: ರೋಟರಿ ವಲಯ 6 ರ ವಲಯ ಕಾರ್ಯದರ್ಶಿಯಾಗಿ ಮಡಿಕೇರಿ ಮಿಸ್ಟಿ ಹಿಲ್ಸ್ ನ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ನೇಮಕಗೊಂಡಿದ್ದಾರೆ.
ರೋಟರಿ ವಲಯ 6 ರಲ್ಲಿನ ಮಡಿಕೇರಿ, ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪ, ಹುಣಸೂರು, ಪಿರಿಯಾಪಟ್ಟಣ, ಹನಗೋಡು, ಮಲ್ಲೇಶ್ವರ ಆಲೂರು ಸಿದ್ದಾಪುರ ಸೇರಿದಂತೆ 14 ರೋಟರಿ ಕ್ಲಬ್‍ಗಳ ವಲಯದ ಕಾರ್ಯದರ್ಶಿಯಾಗಿ ಅನಿಲ್ ಅವರನ್ನು ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ನೇಮಿಸಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ಸ್ಥಾಪಕ ಸದಸ್ಯರಾಗಿರುವ ಅನಿಲ್ ಮಿಸ್ಟಿಹಿಲ್ಸ್‍ನ ಅಧ್ಯಕ್ಷರಾಗಿಯೂ ಅನೇಕ ಸಾಮಾಜಿಕ ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರು. ಮಡಿಕೇರಿ ದಸರಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅನಿಲ್ ಜಾರಿಗೊಳಿಸಿದ್ದ ಮಕ್ಕಳ ದಸರಾ ಮತ್ತು ಮಹಿಳಾ ದಸರಾ ಜನಪ್ರಿಯಗೊಂಡಿತ್ತು. 15 ವರ್ಷಗಳಿಂದ ರೋಟರಿಯಲ್ಲಿ ಸಕ್ರಿಯರಾಗಿರುವ ಅನಿಲ್ ಕೊಡಗಿನ ಹಿರಿಯ ಪತ್ರಿಕೋದ್ಯಮಿಯಾಗಿದ್ದಾರೆ ಎಂದು ವಲಯ 6ರ ರೋಟರಿ ಸಹಾಯಕ ಗವರ್ನರ್ ಪಿ.ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.