ಮಡಿಕೇರಿ, ಜು. 2: ಕೊಡಗು ಗೌಡ ಮಹಿಳಾ ಒಕ್ಕೂಟದ ಆಶ್ರಯ ದಲ್ಲಿ ಮುಂಬರುವ ನವೆಂಬರ್ನಲ್ಲಿ ಗೌಡ ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಕ್ಕೂಟದ ಸ್ಥಾಪನೆಯಾಗಿ 22 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಮಟ್ಟದಲ್ಲಿ ಮಹಿಳಾ ಸಮಾವೇಶ ಏರ್ಪಡಿಸಲು ತೀರ್ಮಾ ನಿಸಲಾಗಿದೆ. ಮೈಸೂರು ಗೌಡ ಮಹಿಳಾ ಸಮಾಜದ ಸದಸ್ಯರುಗಳು ಭಾಗವಹಿಸಿದ್ದು, ಚರ್ಚೆ, ಸಲಹೆ ಬಳಿಕ ನವೆಂಬರ್ 19 ರಂದು ಸಮಾವೇಶ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಮಾವೇಶದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಹೊರತರಲು ನಿರ್ಧರಿಸಿದ್ದು, ಲೇಖನಗಳನ್ನು ಕಳುಹಿಸಿಕೊಡಬಹು ದಾಗಿದೆ. ಈ ಬಗೆಗಿನ ಮಾಹಿತಿಗಾಗಿ ಮೊ. 9008571899 ಅನ್ನು ಸಂಪರ್ಕಿಸಬಹುದಾಗಿದೆ. ಸಭೆಯಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಚೀಯಂಡಿ ರಾಧ ಯಾದವ್, ಕೂಡಕಂಡಿ ಕಾವೇರಮ್ಮ ಸೋಮಣ್ಣ ಇನ್ನಿತರರಿದ್ದರು.