ಸಿದ್ದಾಪುರ, ಜು. 2: ನದಿ ದಡದಲ್ಲಿ ಗಾಂಜಾ ಸೇವನೆ ಮಾಡುತಿದ್ದ ಯುವಕರು ಗ್ರಾಮಸ್ಥರ ಕೈಗೆ ಸಿಕ್ಕಿ ಬಳಿಕ ತಪ್ಪಿಸಿಕೊಂಡ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.
ಗುಹ್ಯ ಗ್ರಾಮದ ಕಾವೇರಿ ನದಿ ದಡದಲ್ಲಿ ಯುವಕರ ತಂಡ ಕಳೆದ ಕೆಲವು ದಿನಗಳಿಂದ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿತ್ತು. ಸೋಮವಾರ ಸಂಜೆ ವೇಳೆ ಯುವಕರಿಬ್ಬರು ಬೈಕ್‍ನಲ್ಲಿ ಆಗಮಿಸಿ, ನದಿ ದಡದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದರು ಎನ್ನಲಾಗಿದ್ದು, ಸ್ಥಳೀಯರು ಯುವಕರನ್ನು ಹಿಡಿದು, ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭ ಗಾಂಜಾ ಎಲ್ಲಿಂದ ಬರುತ್ತದೆ? ಸತ್ಯ ಹೇಳಿದರೆ ಬಿಡುತ್ತೇವೆ ಎಂದು ಗ್ರಾಮಸ್ಥರು ಕೇಳಿದ್ದು, ಮೈಸೂರಿನ ಮಂಡಿಯಿಂದ ತರುವದಾಗಿ ಯುವಕ ತಿಳಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕರ ಬಳಿ ಗಾಂಜಾ ಇರುವ ದೃಶ್ಯ ಕೂಡ ಇದ್ದು, ಬಳಿಕ ಸಿದ್ದಾಪುರ ಪೊಲೀಸ್ ಠಾಣೆಗೆ ದೂರವಾಣಿಯ ಮೂಲಕ ಸ್ಥಳೀಯರು ದೂರು ನೀಡಿದ ವೇಳೆ ಪೊಲೀಸರು ಬರುವ ಸೂಚನೆ ಅರಿತ ಯುವಕರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.