*ಗೋಣಿಕೊಪ್ಪಲು, ಜು. 1: ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಕರ್ತವ್ಯಲೋಪವೆಸಗಿರುವಕ್ಕಾಗಿ ದೇವರಪುರ ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಎಂ.ಕೆ ಮೋಹನ್ ಅವರನ್ನು ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಅವರು, ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸಿದ್ದಾರೆ.

ದೇವರಪುರ ಗ್ರಾಮ ಪಂಚಾಯಿತಿಯಲ್ಲಿ ಎಂ.ಕೆ ಮೋಹನ್ ಗ್ರೇಡ್-02 ಕಾರ್ಯದರ್ಶಿಯಾಗಿದ್ದು, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಮೇಲೆ ಸಾರ್ವಜನಿಕರು ನೀಡಿದ ದೂರನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ.ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡದೆ ತೆರಿಗೆ ವಸೂಲಾತಿಯನ್ನು ಸಕಾಲದಲ್ಲಿ ಜಮೆ ಮಾಡದೆ; ತಾತ್ಕಾಲಿಕ ಹಣ ದುರುಪಯೋಗ ಮಾಡಿಕೊಂಡಿರುವದು ಮತ್ತು ಈ ಹಾಜರಾತಿಯನ್ನು ಸರಿಯಾಗಿ ಪರಿಶೀಲಿಸದೇ ವೇತನವನ್ನು ಪಾವತಿಸಿರುವದು ಬೆಳಕಿಗೆ ಬಂದಿದೆ. ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ನಿಯಮಾನುಸಾರ ನಡೆಸಲು ವಿಫಲರಾಗಿರುವದು, ಮೀನುಮಾರಾಟ ಹರಾಜು ಪ್ರಕ್ರಿಯೆಯಲ್ಲಿ ಲೋಪ, ಸರ್ಕಾರದ ಮಾರ್ಗಸೂಚಿಯಂತೆ ತೆರಿಗೆ ಪರಿಸ್ಕರಣೆ ಮಾಡದೇ ಇರುವದು ಗ್ರಾಮ ಪಂಚಾಯಿತಿ ಸಭಾ ನಡುವಳಿಯನ್ನು ನಿಯಮಾನುಸಾರ ನಿರ್ವಹಿಸದೇ ಕರ್ತವ್ಯಲೋಪವೆಸಗಿರುವದು, ನಗದು ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷ್ಯವಹಿಸಿರುವದು. ಮಹತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಾನವ ದಿನಗಳ ಸೃಜನೆ ಮಾಡದೇ ಯೋಜನೆ ಕುಂಠಿತಗೊಂಡಿರುವದು ಬೆಳಕಿಗೆ ಬಂದಿದೆ.

(ಮೊದಲ ಪುಟದಿಂದ) ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ರೋಜ್‍ಗಾರ್ ದಿವಸ ಆಚರಿಸದೇ ಇರುವದು ಇವೆಲ್ಲವನ್ನು ಪರಿಗಣಿಸಿ ಅಮಾನತುಗೊಳಿಸಲಾಗಿದೆ.

ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇವರಿಗೆ ಸಲ್ಲಿಸಿದ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಯನಿರ್ವಹಣಾಧಿಕಾರಿಯವರು ಸಲ್ಲಿಸಿದ ವರದಿಯ ಪ್ರಕಾರ; ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಮೋಹನ್ ಸರ್ಕಾರದ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ವಿಫಲರಾಗಿರುವದಲ್ಲದೇ; ಕಚೆÉೀರಿ ಕೆಲಸದಲ್ಲಿ ನಿರ್ಲಕ್ಷ್ಯತನ, ನೌಕರರಿಗೆ ಕಿರುಕುಳ ಇದರ ಪ್ರಕಾರ ಕರ್ನಾಟಕ ನಾಗರೀಕ ಸೇವಾ ನಡತೆ 1966 ನಿಯಮ 3 (1 2 3) ಉಲ್ಲೇಖಿಸಿ 1957 ರ ನಿಯಮದ 10 ಅನ್ವಯ ಅಧಿಕಾರಿಯವರನ್ನು ಅಮಾನತ್ತಿನಲ್ಲಿಡಲು ಆದೇಶಿಸಿದೆ. ಅಲ್ಲದೇ ಅಮಾನತ್ತಿನಲ್ಲಿರುವ ಅಧಿಕಾರಿ ಸÀಕ್ಷಮ ಪ್ರಾಧಿಕಾರಿ ಅವರ ಅನುಮತಿ ಇಲ್ಲದೇ ತಮ್ಮ ವಾಸಸ್ಥಳವನ್ನು ಬಿಟ್ಟು ಹೊರ ಹೋಗತಕ್ಕದಲ್ಲ ಎಂದು ಆದೇಶ ಮಾಡಲಾಗಿದೆ.