ಚೆಟ್ಟಳ್ಳಿ, ಜು. 2: ನಂಜರಾಯ ಪಟ್ಟಣದ ನಿವಾಸಿ ಮೊಹಮ್ಮದ್ ಹನೀಫ್ ಸಮಾಜ ಸೇವೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ನಂಜರಾಯಪಟ್ಟಣದ ಕಾಸಿಂ ಹಾಗೂ ರಹೀಮಾಬಿ ದಂಪತಿ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಸಿಟಿಜನ್ ಲೇಬರ್ ವೆಲ್‍ಫೇರ್ ಆಂಡ್ ಆ್ಯಂಟಿ ಕರಪ್ಷನ್ ಕಮಿಟಿ ಅಧ್ಯಕ್ಷರಾಗಿರುವ ಇವರು ಕಳೆದ ಹದಿನೈದು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ಮಾನವ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವದು ಹಾಗೂ ಅನ್ಯಾಯಕ್ಕೊಳಗಾಗಿರುವ ಕಾರ್ಮಿಕರಿಗೆ ನ್ಯಾಯಕೊಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ನ್ಯಾಷನಲ್ ವರ್ಚುವೆಲ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್ ವಿದ್ಯಾ ಸಂಸ್ಥೆಯು ಗೌರವ ಡಾಕ್ಟರೇಟ್ ನೀಡಿದೆ.