ಕುಶಾಲನಗರ, ಜು. 2: ಮೈಸೂರು ಜಿಲ್ಲಾ ಇನ್ನರ್ ವೀಲ್ ನಿಕಟಪೂರ್ವ ಅಧ್ಯಕ್ಷೆ ನಯನ ಅಚ್ಚಪ್ಪ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು.
ಇನ್ನರ್ ವ್ಹೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಕವಿತಾ ಸಾತಪ್ಪನ್, ಕಾರ್ಯದರ್ಶಿಯಾಗಿ ನೇಹ ಜಗದೀಶ್, ಖಜಾಂಚಿಯಾಗಿ ತೇಜಸ್ವಿನಿ, ವಿವಿಧ ಘಟಕಗಳ ಪದಾಧಿಕಾರಿಗಳಾಗಿ ಜಾಸ್ಮಿನ್ ಪ್ರಕಾಶ್, ಅಶ್ವಿನಿ ರೈ, ಚೈತ್ರ ಹಾಗೂ ಶಾಲಿನಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಸೂರ್ಲಬಿ ಮತ್ತು ಗರ್ವಾಲೆಯ ಹತ್ತು ಸಂತ್ರಸ್ತ ಕುಟುಂಬ ಸದಸ್ಯರಿಗೆ ಟಾರ್ಪಲಿನ್‍ಗಳನ್ನು ವಿತರಿಸಿದರು. ನಿಕಟಪೂರ್ವ ಅಧ್ಯಕ್ಷೆ ಸುನಿತಾ ಮಹೇಶ್ ಇದ್ದರು.