ಡಿ ಮೂರು ದಿನಗಳ ತರಬೇತಿ ಮುಕ್ತಾಯ

ಡಿ ಪೊಲೀಸ್ ಇಲಾಖೆ ಪ್ರಶಂಸನಾ ಪತ್ರ

ಮಡಿಕೇರಿ, ಜು. 2: ದಕ್ಷಿಣ ಕೊಡಗಿನ ವಿವಿಧ ಗಿರಿಜನ ಹಾಡಿಗಳ ಸುಮಾರು ಒಂದು ನೂರು ಯುವಕರು ಹಾಗೂ ಯುವತಿಯರಿಗೆ ಪೊಲೀಸ್ ಇಲಾಖೆಯಿಂದ ಮೂರು ದಿನಗಳ ತರಬೇತಿ ನೀಡಲಾಯಿತು. ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಲ್ಲಿ ಜೂನ್ 28 ರಿಂದ 30ರ ತನಕ ಏರ್ಪಡಿಸಿದ್ದ ಪೊಲೀಸ್ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸತತ ಮಾರ್ಗದರ್ಶನ ನೀಡಲಾಯಿತು.

ನಿವೃತ್ತ ಅಧಿಕಾರಿಗಳು, ಬೆಂಗಳೂರು ಹಾಗೂ ಮೈಸೂರಿನ ತಜ್ಞರು ಗಿರಿಜನ ಶಿಕ್ಷಣಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಸಂದರ್ಶನ ಮತ್ತು ಲಿಖಿತ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಬೋಧನೆ ನೀಡಿದರು. ಗಿರಿಜನ ಯುವಕ - ಯುವತಿಯರು ಶಾರೀರಿಕವಾಗಿ; ಮಾನಸಿಕವಾಗಿ ಹೊಂದಿರಬೇಕಾದ ದೇಹದಾಢ್ರ್ಯತೆ ಮತ್ತಿತರ ವಿಷಯಗಳ ಕುರಿತು ಈ ವೇಳೆ ತಿಳಿಹೇಳಲಾಯಿತು.

ಯುವ ಜನತೆ ದುಶ್ಚಟಗಳಿಂದ ಮುಕ್ತರಿದ್ದು, ಸಮಾಜದ ಮುಖ್ಯವಾಹಿನಿಯಲ್ಲಿ ವಿವಿಧ ಉದ್ಯೋಗಷಗಳನ್ನು ಆಯ್ಕೆ ಮಾಡಿಕೊಂಡು, ಸರಕಾರ ಕಲ್ಪಿಸಿರುವ ಸೌಲಭ್ಯಗಳನ್ನು ಹೊಂದಿಕೊಳ್ಳುವಂತೆ ಮಾರ್ಗದರ್ಶನ ನೀಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಡಿವೈಎಸ್‍ಪಿ ನಾಗಪ್ಪ ಸೇರಿದಂತೆ ಶಿಕ್ಷಣಾರ್ಥಿಗಳಿಗೆ ಅನೇಕ ಮುಖ್ಯಸ್ಥರು ವಿವಿಧ ವಿಷಯಗಳ ಕುರಿತು ಮಾಹಿತಿ ಒದಗಿಸಿದರು. ಶಿಬಿರಾರ್ಥಿಗಳ ಸ್ಪಂದನಕ್ಕೆ ಮುಕ್ತ ಕಂಠದಿಂದ ಪ್ರಶಂಶಿಸಿರುವ ಅಧಿಕಾರಿಗಳು ಪುರಸ್ಕಾರ ಪತ್ರ ನೀಡಿ ಬೀಳ್ಕೊಟ್ಟರು.