ಸೋಮವಾರಪೇಟೆ,ಜೂ.30: ಪಟ್ಟಣದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಶ್ರೀ ರಾಮ ಪತ್ತಿನ ಸಹಕಾರ ಸಂಘದ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.
ಇತ್ತೀಚೆಗಷ್ಟೆ ಆರಂಭವಾದ ಶ್ರೀ ರಾಮ ಪತ್ತಿನ ಸಹಕಾರ ಸಂಘಕ್ಕೆ ಕಾರ್ಯಾಲಯವನ್ನು ಆರಂಭಿಸಲಾಗಿದ್ದು, ಈಗಾಗಲೇ ಸದಸ್ಯತ್ವ ಹಾಗೂ ಠೇವಣಿಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ರೀತಿಯ ವ್ಯವಹಾರಗಳು ಆರಂಭವಾಗಲಿದೆ ಎಂದು ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.
ಸಹಕಾರ ಸಂಘಗಳ ವಿಶ್ರಾಂತ ಉಪನಿಬಂಧಕರಾದ ಬಿ.ಪಿ. ಬಸಪ್ಪನವರು ರೂ. 1.50 ಲಕ್ಷದ ಮೊತ್ತದ ಹಣವನ್ನು ಠೇವಣಿಯಾಗಿ ಇರಿಸುವ ಮೂಲಕ ಸಂಘದ ಹಣಕಾಸು ವ್ಯವಹಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಸಂಘದ ನಿರ್ದೇಶಕರುಗಳು ಹಾಗೂ ಕಾರ್ಯದರ್ಶಿ ಬಿ.ಎಂ. ಶ್ರೀಧರ್, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.