ಚೆಟ್ಟಳ್ಳಿ, ಜೂ. 30: ಕಾಡಾನೆಯೊಂದು ಮನೆಯ ಮುಂಬಾಗಿಲಿನ ಬಳಿ ಬಂದು ಹೂಕುಂಡವನ್ನೆಲ್ಲ ಒಡೆದು ಬಿಸಾಡಿದ ಘಟನೆ ನಡೆದಿದೆ.

ಚೆಟ್ಟಳ್ಳಿ ಗ್ರಾಮಪಂಚಾಯಿತಿಗೆ ಒಳಪಡುವ ಚೇರಳ ಶ್ರೀಮಂಗಲ ಗ್ರಾಮದ ಹೊಸಮನೆ ಪೂವಯ್ಯ ಹಾಗೂ ಹೊಸಮನೆ ತಮ್ಮಪ್ಪ ಅವರುಗಳು ಸಣ್ಣ ಬೆಳೆಗಾರರಾಗಿದ್ದು, ಸಮೀಪದ ಮೀನುಕೊಲ್ಲಿ ಅರಣ್ಯದಿಂದ ಕಾಡಾನೆಗಳು ನಿತ್ಯವೂ ತೋಟದೊಳಗೆ ನುಗ್ಗಿ ಕಾಫಿ, ಅಡಿಕೆ, ತೆಂಗು ಗಿಡವನೆಲ್ಲಾ ಮುರಿದು, ನೆಟ್ಟ ಸಸಿಗಳನೆಲ್ಲಾ ಮೆಟ್ಟಿ ನಾಶಪಡಿಸಿವೆ. ಹೊಸಮನೆ ಪೂವಯ್ಯ ಅಳಲು ತೋಡಿಕೊಂಡಿದ್ದಾರೆ.

ಮುಂಜಾನೆ ಕಾಡಾನೆಗಳು ಮನೆಯ ಸುತ್ತಲ ತೋಟದಲ್ಲಿ ಸುತ್ತಾಡಿ ಹೊಸಮನೆ ಟಿ. ಪೂವಯ್ಯ ಅವರ ಮನೆಯ ಮೆಟ್ಟಿಲೇರಿ ಬಂದು ಹೂ ಕುಂಡವನೆಲ್ಲಾ ಎಳೆದಾಡಿ ಒಡೆದು ಹಾಕಿವೆ.

ರಾತ್ರಿಯಾಗುತ್ತಲೆ ನಿತ್ಯವೂ ಬರುವ ಕಾಡಾನೆಗಳು ಹಲಸು ಹಾಗೂ ಮಾವಿನ ಹಣ್ಣಿರುವ ಮರಕ್ಕೆ ತಮ್ಮ ಕೋರೆಯಿಂದ ತಿವಿದು ಹಣ್ಣನ್ನು ಕೆಡವಿ ತಿಂದು ಹೊಟ್ಟೆ ತುಂಬಿಸಿ ಬೆಳಗಾಗುತ್ತಲೆ ಕಾಡು ಸೇರುತª. -ಕರುಣ್