ಮಡಿಕೇರಿ, ಜೂ. 30: ಕರ್ನಾಟಕ ಸರಕಾರದಿಂದ ತಹಶೀಲ್ದಾರ್‍ಗಳ ವರ್ಗಾವಣೆ ಮಾಡಲಾಗಿದೆ. ಇದುವರೆಗೆ ಮಡಿಕೇರಿ ತಾಲೂಕು ತಹಶೀಲ್ದಾರ್ ಆಗಿದ್ದ ಎ.ಎ. ಕುಸುಮ ಅವರನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಶೀಲ್ದಾರ್ ಆಗಿ ನೇಮಿಸಲಾಗಿದೆ.ತೆರವುಗೊಂಡಿರುವ ಸ್ಥಾನಕ್ಕೆ ಮಡಿಕೇರಿ ಉಪವಿಭಾಗ ಕಚೇರಿಯ ಪಿ.ಎಸ್. ಮಹೇಶ್ ಅವರನ್ನು ನೇಮಿಸಲಾಗಿದೆ. ವೀರಾಜಪೇಟೆ ತಾಲೂಕು ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ಅವರನ್ನು ಕೊರಟಗೆರೆಗೆ ವರ್ಗಾಯಿಸಲಾಗಿದೆ. ವೀರಾಜಪೇಟೆ ತಹಶೀಲ್ದಾರರಾಗಿ ಚಾಮರಾಜನಗರದಿಂದ ಪುರಂದರ ಎಂಬವರನ್ನು ನಿಯೋಜಿಸಲಾಗಿದೆ.