ಸಿದ್ದಾಪುರ, ಜೂ. 30: ಬಸ್ಸು ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಗಾಯಗೊಂಡಿರುವ ಘಟನೆ ಸಿದ್ದಾಪುರದ ಅಂಬೇಡ್ಕರ್ ನಗರದ ಬಳಿ ನಡೆದಿದೆ.
ಭಾನುವಾರ ಸಂಜೆ ವೀರಾಜಪೇಟೆಯಿಂದ ಸಿದ್ದಾಪುರ ಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಹಾಗೂ ಅರಕಲಗೋಡಿನಿಂದ ಸಿದ್ದಾಪುರ ಮಾರ್ಗವಾಗಿ ವೀರಾಜಪೇಟೆಗೆ ತೆರಳುತ್ತಿದ್ದ ಆಲ್ಟೋ ಕಾರು ಕೆ.ಎ.03 ಎಂ.ಹೆಚ್. 3967) ನಡುವೆ ಸಿದ್ದಾಪುರದ ಅಂಬೇಡ್ಕರ್ ನಗರದ ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಚಾಲಕ ಇಮ್ರಾನ್ ಎಂಬಾತನ ಹಣೆಯ ಭಾಗಕ್ಕೆ ಹಾಗೂ ಕೈಗೆ ಗಾಯವಾಗಿದ್ದು ಗಾಯಾಳು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕಾರು ಜಖಂಗೊಂಡಿದ್ದು ಬಸ್ಸಿನ ಮುಂಭಾಗದ ಒಂದು ಬದಿಗೆ ಹಾನಿಯಾಗಿದೆ. ಈ ಬಗ್ಗೆ ಸಿದ್ದಾಪುರ ಠಾಣಾಧಿಕಾರಿ ದಯಾನಂದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.