ಸಿದ್ದಾಪುರ, ಜೂ. 30: ಶ್ರೀ ಧರ್ಮಸ್ಥಳ ಮಹಿಳಾ ಸಂಘದ ಜ್ಞಾನವಿಕಾಸ ಘಟಕದ ಸದಸ್ಯರಿಗೆ ಜಿಲ್ಲಾ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಸಂಘದ ಸದಸ್ಯರು ಸಿದ್ದಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಬಳಿಕ ಕೂಡಿಗೆಯ ಹಾಲು ಉತ್ಪಾದಕ ಕೇಂದ್ರ, ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು.
ಕಣ್ಣಂಗಾಲ ಗ್ರಾಮದ ಜ್ಞಾನೋದಯ ಹಾಗೂ ಸಿದ್ದಾಪುರದ ಜ್ಞಾನವಿಕಾಸ ಮಹಿಳಾ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು. ಸಮನ್ವಯ ಅಧಿಕಾರಿ ಜಯಂತಿ, ಸೇವಾ ಪ್ರತಿನಿಧಿ ಗೀತಾ, ರಾಧ, ರೇಖಾ ಸೇರಿದಂತೆ ಇನ್ನಿತರರು ಇದ್ದರು.