ಮಡಿಕೇರಿ, ಜೂ. 30: ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯ ಪ್ರಶಾಂತಿ ನಿಲಯದಲ್ಲಿ ನೂತನ ಗ್ರಂಥಾಲಯ ಕೊಠಡಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್‍ನ ರೇಣುಕುಮಾರ್, ಜಿಲ್ಲಾ ಗವರ್ನರ್ ಎಂ.ಎನ್. ಜಯಪ್ರಕಾಶ್, ವೀರಶೈವ ಸಜ್ಜನ ಸಂಘ, ಮೈಸೂರು ಸಂಸ್ಥೆ ಗುಬ್ಬಿ ಟ್ರಸ್ಟ್ ರಾಮಯ್ಯ, ಸ್ಪೋಟ್ರ್ಸ್ ಕ್ಲಬ್ ಶಶಿಧರ್, ಜೋನಲ್ ಅಧ್ಯಕ್ಷ ಚೆರಿಯಪಂಡ ವಿಶ್ವನಾಥ್, ಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿ ಟ್ರಸ್ಟಿಗಳಾದ ಗೌರವ್ ಗಣಪತಿ, ಯುಕೋ ಸಂಸ್ಥೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಸಂಸ್ಥೆಯ ನಿರ್ದೇಶಕರಾದ ಅರಮಾಣಮಾಡ ಸತೀಶ್, ಲಯನ್ಸ್ ಕ್ಲಬ್‍ನ ಸದಸ್ಯರು, ವಿದ್ಯಾಸಂಸ್ಥೆಯ ಬಿ.ಇಡಿ/ಡಿ.ಇಡಿ ಕಾಲೇಜು, ಶಾಲಾ ವಿಭಾಗದ ಮುಖೋಪಾಧ್ಯಾಯರು, ಅಧ್ಯಾಪಕ-ಅಧ್ಯಾಪಕೇತರ ವರ್ಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಾನಿಗಳಾದ ಲಯನ್ಸ್ ಕ್ಲಬ್‍ನ ವಿ. ರೇಣುಕಮಾರ್ ಮಾತನಾಡಿ, ಪ್ರಕೃತಿ ವಿಕೋಪ ಸಂತಸ್ತ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಮೂಲಕ ಉತ್ತಮ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು. ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸೇವೆ ಎಂಬದು ಏನು ಎಂದು ಪಕೃತಿ ವಿಕೋಪ ಸಂತ್ರಸ್ತ ಮಕ್ಕಳಿಗೆ ತಿಳಿದಿದೆ. ಆದ್ದರಿಂದ ವಿದ್ಯೆಯನ್ನು ಚೆನ್ನಾಗಿ ಪಡೆದುಕೊಳ್ಳಬೇಕು. ಎಲ್ಲರೂ ಸಹಾಯ ಹಸ್ತ ಚಾಚಿರುವಾಗ ಅದನ್ನು ಉತ್ತಮವಾಗಿ ಬಳಸಿ ಯಶಸ್ವಿಯಾಗಬೇಕೆಂದರು. ಪ್ರಾಂಶುಪಾಲ ಪಿ.ಎ. ನಾರಾಯಣ ಸ್ವಾಗತಿಸಿ, ಉಪನ್ಯಾಸಕಿ ಚೋಂದಮ್ಮ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕಿ ನೀತಿ ವಂದಿಸಿದರು.