*ಗೋಣಿಕೊಪ್ಪಲು, ಜೂ. 30: ಕುಂದ ಗ್ರಾಮದ ಬಸವೇಶ್ವರ ಬಡಾವಣೆಯ ನಿವಾಸಿಗಳಿಗೆ ಹಾತೂರು ಗ್ರಾ.ಪಂ. ವತಿಯಿಂದ ಟಾರ್ಪಲ್‍ಗಳನ್ನು ವಿತರಿಸಲಾಯಿತು.
ಹಾತೂರು ಗ್ರಾ.ಪಂ. ವ್ಯಾಪ್ತಿಗೊಳಪಡುವ ಕುಂದ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಜನಾಂಗದ ನೂತನ ಬಡಾವಣೆ ನಿರ್ಮಾಣವಾಗಿದೆ. ಬಡಾವಣೆಯ ಎಲ್ಲಾ ನಿವಾಸಿಗಳಿಗೆ ಅಲ್ಪ ಸಮಯದಲ್ಲಿ ಮನೆಗಳ ನಿರ್ಮಾಣವಾಗದ ಕಾರಣ ಈ ಬಾರಿಯ ಮಳೆಗಾಲದ ರಕ್ಷಣೆಗಾಗಿ ತಮ್ಮ ಗುಡಿಸಲುಗಳಿಗೆ ಅಳವಡಿಸಿಕೊಳ್ಳಲು ಟಾರ್ಪಾಲ್‍ಗಳನ್ನು ನೀಡಲಾಯಿತು.
ಸುಮಾರು 51ಕ್ಕೂ ಹೆಚ್ಚು ಫಲಾನುಭವಿಗಳು ಇದರ ಸೌಲಭ್ಯಗಳನ್ನು ಪಡೆದುಕೊಂಡರು. ಫಲಾನುಭವಿಗಳಿಗೆ ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟ್ಟೀರ ದರ್ಶನ ನಂಜಪ್ಪ ಟಾರ್ಪಲ್‍ಗಳನ್ನು ವಿತರಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ತಿಮ್ಮಯ್ಯ ಹಾಗೂ ಬಡಾವಣೆಯ ಪ್ರಮುಖ ಗಪ್ಪು ಮತ್ತು ನಿವಾಸಿಗಳು ಹಾಜರಿದ್ದರು.