ಸೋಮವಾರಪೇಟೆ, ಜೂ. 30: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಸ್ಥಳೀಯ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ವಲಯ ಮಟ್ಟದ ನಾಯಕಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿರೇಟ್ ಮಾಜಿ ಅಧ್ಯಕ್ಷೆ ಮಾಯಾ ಗಿರೀಶ್ ವಹಿಸಿದ್ದರು. ವಲಯಾಧ್ಯಕ್ಷೆ ಜೆಫಿನ್ ಜಾಯ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಎಸ್‍ಎಸ್‍ಎನ್ ಬ್ಯಾಂಕ್ ನಿರ್ದೇಶಕಿ ಕವಿತಾ ವಿರೂಪಾಕ್ಷ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೇಸೀ ಪೂರ್ವ ವಲಯಾಧ್ಯಕ್ಷ ಮಧೋಶ್ ಪೂವಯ್ಯ, ಜೇಸಿಐ ಸೋಮವಾರಪೇಟೆ ಜೇಸೀ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್, ರಾಷ್ಟ್ರೀಯ ತರಬೇತುದಾರರಾದ ನೇಹಾ ಚೌಧರಿ, ವಲಯ ಉಪಾಧ್ಯಕ್ಷ ಕೆ. ಪ್ರವೀಣ್, ಯೋಜನಾ ನಿರ್ದೇಶಕಿ ಮಂಜುಳಾ ಸುಬ್ರಮಣಿ ಅವರುಗಳು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಸೋನಿಯಾ ಮಂದಪ್ಪ, ಗಾಯತ್ರಿ ಸುರೇಶ್, ನಂದಿತಾ ಶರ್ಮಾ, ಅಕ್ಷಿತಾ ಅವರುಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮಹಿಳಾ ಸಬಲೀಕರಣ ಕುರಿತಂತೆ ರಾಷ್ಟ್ರೀಯ ತರಬೇತುದಾರರಾದ ಜೇಸಿ ನೇಹಾ ಚೌಧರಿ ಅವರು ಜೇಸೀ ಸದಸ್ಯರಿಗೆ ತರಬೇತಿ ನೀಡಿದರು.