ಕೂಡಿಗೆ, ಜೂ. 30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ವತಿಯಿಂದ ಗೋಣಿಮರೂರು ಪಂಚಾಯಿತಿಯ ನಾಗವಳ ಗ್ರಾಮದ ಬಾಲ್ ಕೆರೆಯ ದಡದದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಗಾಮದ ಮಾಜಿ ಸೈನಿಕ ಉದಯಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋಣಿಮರೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾವೇರಿ ಮಾತನಾಡಿ, ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. ಗಿಡಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು ಎಂದರು.
ವಲಯದ ಮೇಲ್ವಿಚಾರಕ ಕೆ. ವಿನೋದ್ ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗೋಣಿಮರೂರು ಒಕ್ಕೂಟದ ವತಿಯಿಂದ ಗಿಡ ನಾಟಿ ಮಾಡಿದ್ದು ಇದರ ಪೆÇೀಷಣೆಯನ್ನು ಗ್ರಾಮಸ್ಥರು ಮಾಡಬೇಕು ಎಂದರು.
ಈ ಸಂದರ್ಭ ಕೆರೆ ಸಮಿತಿ ಅಧ್ಯಕ್ಷ, ನಂಜಪ್ಪ ಅವರು 60 ಗಿಡಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಚೇತನ್, ಮಾಜಿ ಅಧ್ಯಕ್ಷ ಸುರೇಂದ್ರ, ಕಾರ್ಯದರ್ಶಿ ಪುನೀತ್, ಕೆರೆ ಸಮಿತಿ ಉಪಾಧ್ಯಕ್ಷರಾದ ರನ್ದನ್ನ್ ಪ್ರಿಯ, ಕೃಷಿ ಮೇಲ್ವಿಚಾರಕಿ ಗೀತಾ, ಸೇವಾ ಪ್ರತಿನಿಧಿ ಸರೋಜ ಹಾಗೂ ಗ್ರಾಮಸ್ಥರು ಹಾಜರಿದ್ದರು.