ಮಡಿಕೇರಿ, ಜೂ. 29: ಲಯನ್ಸ್ ಕ್ಲಬ್ ಇಂಟರ್‍ನ್ಯಾಶನಲ್ ಸಂಪಾಜೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ತಾ. 22 ರಂದು ಸಂಪಾಜೆ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ 2ನೇ ಉಪಜಿಲ್ಲಾ ರಾಜ್ಯಪಾಲ ಎಂ.ಜೆ.ಎಫ್. ಲ. ವಸಂತ್ ಕುಮಾರ್ ಶೆಟ್ಟಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸಭಾಧ್ಯಕ್ಷತೆಯನ್ನು ಲ.ಇ.ವಿ. ಪ್ರಶಾಂತ್ ಬಾಲನ್ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಲ.ಕಿಶೋರ್ ಕುಮಾರ್ ಪಿ.ಬಿ, ಕಾರ್ಯದರ್ಶಿಯಾಗಿ, ಲ. ಸಂಧ್ಯಾ ಸಚಿತ್ ರೈ, ಖಜಾಂಜಿಯಾಗಿ ಲ.ಯೋಗೇಶ್ವರ್ ಎಸ್. ಅಧಿಕಾರ ಸ್ವೀಕರಿಸಿದರು. ಆ ಬಳಿಕ ನೂತನ ಅಧ್ಯಕ್ಷ ಲ.ಕಿಶೋರ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ವೇದಿಕೆಯಲ್ಲಿ ಲಯನ್ಸ್ ಪ್ರಾಂತೀಯ ನಿಕಟಪೂರ್ವ ಅಧ್ಯಕ್ಷ ಜಾಕೆ ಮಾಧವ ಗೌಡ ಉಪಸ್ಥಿತರಿದ್ದರು. ಈ ಸಂದರ್ಭ ಕ್ಲಬ್ಬಿನ ಹೊಸ ಸದಸ್ಯರಾಗಿ ಕಲ್ಲುಗುಂಡಿಯ ಸ್ಪಾಟ್ ಕಂಪ್ಯೂಟರ್ ಎಜ್ಯುಕೇಶನ್ ಹಾಗೂ ಸೈಬರ್ ಸ್ಪಾಟ್‍ನ ಮಾಲೀಕ ಕಿಶೋರ್ ಕುಮಾರ್ ಸೇರ್ಪಡೆಗೊಂಡರು. ಹಿರಿಯ ಸದಸ್ಯ ಲ.ಎನ್.ಎಸ್. ದೇವಿಪ್ರಸಾದ್ ದಂಪತಿಯ 50ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಈ ಸಂದರ್ಭ ಸನ್ಮಾನಿಸಲಾಯಿತು.

ವಿಟ್ಲ, ಪುತ್ತೂರು, ಸುಳ್ಯ, ಪಂಜ, ಗುತ್ತಿಗಾರು, ಜಾಲ್ಸೂರು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.