ಮಡಿಕೇರಿ, ಜೂ. 29: ಅಕ್ರಮವಾಗಿ ಮರಗಳನ್ನು ಕಳವು ಮಾಡಿ ಸಾಗಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಅಪರಾಧ ಪತ್ತೆದಳ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಬೆಟ್ಟಗೇರಿ ಗ್ರಾಮದಲ್ಲಿ ತೋಟವೊಂದರಿಂದ ಹಲಸು ಹಾಗೂ ಹೆಬ್ಬಲಸು ಮರಗಳ ಸುಮಾರು 22 ನಾಟಾಗಳನ್ನು ಕಳವು ಮಾಡಿ ಲಾರಿ (ಕೆಎ 46 6956)ನಲ್ಲಿ ತುಂಬಿಕೊಂಡು ಸಾಗಿಸಲು ಯತ್ನಿಸುತಿದ್ದ ವೇಳೆ ಧಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳಾದ ಕಕ್ಕಬೆಯ ಅಶ್ರಫ್, ರಿಯಾಜ್, ಪಾಲೂರಿನ ಅಬ್ದುಲ್ ರಹಿಂ, ಪುತ್ತೂರಿನ ಆರಿಸ್ ಹಾಗೂ ರಿಯಾಸ್ ಇವರುಗಳನ್ನು ಬಂಧಿಸಿದೆ. ಲಾರಿ ಹಾಗೂ ಮರಗಳೊಂದಿಗೆ ಲಾರಿಗೆ ಬೆಂಗಾವಲಿಗೆ ಬಳಸಿದ್ದ ಸ್ವಿಫ್ಟ್ ಕಾರು (ಕೆಎ 12 ಜೆಡ್ 3113), ಝೆನ್ ಕಾರು (ಕೆಎ 20 ಎನ್ 1117) ಹಾಗೂ 15 ಸಾವಿರ ನಗದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್ಪಿ ಡಾ. ಸುಮನ್ ಡಿ.ಪಿ. ಅವರ (ಮೊದಲ ಪುಟದಿಂದ) ನೇತೃತ್ವದಲ್ಲಿ ಮಡಿಕೇರಿ ಡಿವೈಎಸ್ಪಿ ಸುಂದರ್ರಾಜ್ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಎಂ. ಮಹೇಶ್, ಎಎಸ್ಐ ಕೆ.ವೈ. ಹಮೀದ್, ಸಿಬ್ಬಂದಿಗಳಾದ ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್. ಅನಿಲ್ ಕುಮಾರ್, ಕೆ.ಆರ್. ವಸಂತ, ವಿ.ಜಿ. ವೆಂಕಟೇಶ್, ಚಾಲಕರಾದ ಕೆ.ಎಸ್. ಶಶಿಕುಮಾರ್, ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕ ಚೇತನ್, ಪ್ರೊಬೆಷನರಿ ಪಿಎಸ್ಐ ಶೇಷಾದ್ರಿ ಕುಮಾರ್, ಸಿಬ್ಬಂದಿಗಳಾದ ತೀರ್ಥಕುಮಾರ್, ಕಲ್ಲಪ್ಪ ಹಿಟ್ನಾಳ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳು ಹಾಗೂ ಮಾಲನ್ನು ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಎಸ್ಪಿಯವರು ನಗದು ಬಹುಮಾನವನ್ನು ಘೋಷಿಸಿದ್ದಾರೆ.