ಗೋಣಿಕೊಪ್ಪಲು, ಜೂ. 29: ನಿವೃತ್ತ ಅರಣ್ಯಾಧಿಕಾರಿ, ವನ್ಯಪ್ರೇಮಿ ಕೋಟ್ರಂಗಡ ಎಂ. ಚಿಣ್ಣಪ್ಪ ಅನುಭವದ ‘ಕಾಡಿನೊಳಗೊಂದು ಜೀವ’ ಪರಿಷ್ಕøತ ಆವ್ರೃತ್ತಿ ಜುಲೈ 2 ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ರೂಸ್ಟ್ ಹೋಟೆಲ್ನಲ್ಲಿ ಬಿಡುಗಡೆಗೊಳ್ಳಲಿದೆ.
ಪೂರ್ಣಚಂದ್ರ ತೇಜಸ್ವಿ ಅವರು 2000 ಇಸವಿಯಲ್ಲಿ ತಮ್ಮ ಪುಸ್ತಕ ಪ್ರಕಾಶನದಿಂದ ಮೊದಲಿಗೆ ಪ್ರಕಟಿಸಿದ್ದ ಕೃತಿಯನ್ನು ಶ್ರೀಮಂಗಲ ಪ.ಪೂ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಟಿ.ಎಸ್. ಗೋಪಾಲ್ ನಿರೂಪಿಸಿದ್ದರು.
ಇದೀಗ ಸಮಗ್ರ ಹಾಗೂ ಪರಿಷ್ಕøತ ಮುದ್ರಣ ಜವಬ್ದಾರಿಯನ್ನು ಮೈಸೂರಿನ ಭಾರತಿ ಪ್ರಕಾಶನವು ವಹಿಸಿಕೊಂಡಿದೆ. ಒಟ್ಟು 400 ಪುಟಗಳನ್ನು ಒಳಗೊಂಡಿರುವ ಪುಸ್ತಕದಲ್ಲಿ 16 ಪುಟಗಳ ಬಹುವರ್ಣ ಚಿತ್ರಗಳು ಹಾಗೂ ಹೊಸಾ ಅಧ್ಯಾಯಗಳೂ ಸೇರಿಸಲಾಗಿದೆ. ವನ್ಯಜೀವಿ ಅಧ್ಯಯನ ಕೌಶಲ, ಚಿಣ್ಣಪ್ಪನವರೊಂದಿಗಿನ ಒಡನಾಟ, ಅನುಭವಗಳನ್ನು ಅನೇಕರು ಹಂಚಿಕೊಂಡಿದ್ದಾರೆ.
ಇದೀಗ ವೈಲ್ಡ್ ಲೈಫ್ ಫಸ್ಟ್ ಹಾಗೂ ಮೈಸೂರಿನ ಭಾರತಿ ಪ್ರಕಾಶನದ ಸಹಯೋಗದಲ್ಲಿ ಪರಿಷ್ಕøತ ಆವೃತ್ತಿ ಬಿಡುಗಡೆಗೊಳ್ಳಲಿದೆ.
ಬೆಂಗಳೂರು ಅದಮ್ಯಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್ ಬಿಡುಗಡೆಗೊಳಿಸಲಿದ್ದು, ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಪುಸ್ತಕದ ಪರಿಚಯ ಮಾಡಿಕೊಡಲಿದ್ದಾರೆ.