ಸುಂಟಿಕೊಪ, ಜೂ. 29: ಸುಂಟಿಕೊಪ್ಪ ಸಮೀಪದ ಶ್ರೀ ರಾಮ ಬಡಾವಣೆಯ ರಸ್ತೆ ತೀರಾ ಹದಗೆಟ್ಟಿದ್ದು, ಈ ಭಾಗದ ಪಂಚಾಯಿತಿ ಸದಸ್ಯರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಕಾಮಗಾರಿ ಮಾಡದೆ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಪರದಾಡು ವಂತಾಗಿದೆ ಎಂದು ಈ ಬಡಾವಣೆಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಶ್ರೀ ರಾಮ ಬಡಾವಣೆಯ ರಸ್ತೆ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದೆ. ಅಲ್ಲಲಿ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜೀಪು, ಕಾರು, ಮೋಟಾರ್ ಬೈಕ್ ಸೇರಿದಂತೆ ಹಲವು ವಾಹನ ಗಳು ಈ ರಸ್ತೆಗಾಗಿ ಹಾದು ಹೋಗುತ್ತದೆ. ಗ್ರಾಮ ಪಂಚಾಯಿತಿಗೆ ಜನಪ್ರತಿನಿಧಿಗಳಿಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಪಡಿಸುತ್ತೇವೆ ಎಂದು ಭರವಸೆ ನೀಡಿ ಇದೀಗ ಕೈಕಟ್ಟಿ ಕುಳಿತಿದ್ದಾರೆ. ಈ ರಸ್ತೆಗಾಗಿ ನಡೆದಾಡುವ ಸಾರ್ವಜನಿಕರು ಶಾಲಾ ಮಕ್ಕಳು ವಯೋವೃದ್ಧರು ಶಾಪ ಹಾಕುತ್ತಾ ತೆರಳುತ್ತಿದ್ದಾರೆ. ಮಳೆಗಾಲ ದಲ್ಲಿ ವಾಹನಗಳು ಸಂಚರಿಸಲು ಪ್ರಯಾಸಪಡಬೇಕಾಗಿದೆ ಎಂದು ಸ್ಥಳೀಯ ನಾಗರಿಕರು ಅಸಾಹಾಯಕತೆ ವ್ಯಕ್ತಪಡಿಸಿದ್ದಾರೆ. ಮಳೆ ಜೋರಾಗುವ ಮೊದಲು ರಸ್ತೆ ಮರು ಡಾಮರೀಕರಣ ಮಾಡು ವಂತಾಗಲಿ ಎಂದು ಈ ಬಡಾವಣೆ ನಿವಾಸಿಗಳು ವಾಹನ ಚಾಲಕರು ಆಗ್ರಹಿಸಿದ್ದಾರೆ.

- ರಾಜು ರೈ, ಸುಂಟಿಕೊಪ್ಪ