ಮಡಿಕೇರಿ, ಜೂ. 27: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿರುವ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಂ.ಎಸ್ಸಿ ಭೌತಶಾಸ್ತ್ರ, ಎಂ.ಎ. ಅರ್ಥಶಾಸ್ತ್ರ, ಎಂ.ಎ. ಆಂಗ್ಲ, ಎಂ.ಬಿ.ಎ. ಟೂರಿಸಂ ಎಂಡ್ ಟ್ರಾವೆಲ್‍ಮ್ಯಾನೆಜ್‍ಮೆಂಟ್, ಎಂ.ಕಾಂ. ಹಾಗೂ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೋಮ ಕೋರ್ಸುಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಎಂ.ಎಸ್ಸಿ ಭೌತಶಾಸ್ತ್ರ ಮತ್ತು ಎಂ.ಕಾಂ. ತಾ. 28, ಎಂ.ಎ ಅರ್ಥಶಾಸ್ತ್ರ, ಎಂ.ಎ. ಆಂಗ್ಲ, ಎಂ.ಬಿ.ಎ. ಟೂರಿಸಂ ಎಂಡ್ ಟ್ರಾವೆಲ್ ಮ್ಯಾನೆಜ್‍ಮೆಂಟ್ ಜುಲೈ 5 ಹಾಗೂ ಯೋಗವಿಜ್ಞಾನ, ಸ್ನಾತಕೋತ್ತರ ಡಿಪ್ಲೊಮ ಜುಲೈ 30. ಆಸಕ್ತ ವಿದ್ಯಾರ್ಥಿಗಳು ಈ ಸದಾವಕಾಶವನ್ನು ಬಳಸಿಕೊಂಡು ಸೂಕ್ತ ಸಮಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಡಾ. ಟಿ.ಡಿ. ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.