*ಗೋಣಿಕೊಪ್ಪಲು, ಜೂ. 27: ತಿತಿಮತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರವಾನಗಿ ಹೊಂದದೆ ಮೀನು ಮಾರಾಟದಲ್ಲಿ ತೊಡಗಿದ್ದ ಮೀನು ವ್ಯಾಪಾರಿ ಹಾಗೂ ವಾಹನದ ಮೇಲೆ ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ದಿ ಅಧಿಕಾರಿ ವಾಹನವನ್ನು ವಶಪಡಿಸಿಕೊಂಡು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನು ಮಾರಾಟ ಮಾಡಲು 2017-18ನೇ ಸಾಲಿನ ಟೆಂಡರಿನ ಅನ್ವಯ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ 2018-19ನೇ ಸಾಲಿನಲ್ಲಿ ಮೀನು ಮಾರಾಟಕ್ಕೆ ಪಂಚಾಯಿತಿ ವತಿಯಿಂದ ಟೆಂಡರ್ ಕರೆದರೂ, ಟೆಂಡರ್ ಪ್ರಕ್ರಿಯೆಯಲ್ಲಿ ಮೀನು ವ್ಯಾಪಾರಿಗಳು ಭಾಗವಹಿಸಿರಲಿಲ್ಲ. ಹೀಗಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೀನು ವ್ಯಾಪಾರ ಮಾಡಲು ಅವಧಿ ಮುಗಿದಿತ್ತು. ಆದರೂ ಪಂಚಾಯಿತಿಯಿಂದ ಅನುಮತಿ ಪಡೆಯದೆ, ಪರವಾನಗೆ ಹೊಂದದೆ ಅಕ್ರಮವಾಗಿ ಮೀನು ಮಾರಾಟ ಮಾಡುತ್ತಿದ್ದ ಉಮ್ಮರ್ ಎಂಬವರಿಗೆ ಸೇರಿದ ವಾಹನವನ್ನು (ಕೆ.ಎ. 12 ಎ. 8322) ವಶಪಡಿಸಿಕೊಂಡು 5 ಸಾವಿರ ರೂಪಾಯಿ ದಂಡ ವಿಧಿಸಲಾಯಿತು. ನಂತರ ವಾಹನವನ್ನು ಮಾಲೀಕರಿಗೆ ಒಪ್ಪಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು