ವೀರಾಜಪೇಟೆ, ಜೂ. 28: ಕಲ್ಕಿ ಭಕ್ತ ವೃಂದ ವತಿಯಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಯೋಗ ಕಲಿಕೆಗೆ ನೆರವಾಗಲು ನೆಲಹಾಸು (ಮ್ಯಾಟ್)ಗಳನ್ನು ವಿತರಿಸಲಾಯಿತು. ಕಲ್ಕಿ ಭಕ್ತ ವೃಂದ ದಕ್ಷಿಣ ಕೊಡಗು ವತಿಯಿಂದ ಪಾಲಿಬೆಟ್ಟದ ಚೆಷೈರ್ ಹೊಂ ವಿಶೇಷಚೇತನರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಲು ನೆಲಹಾಸುಗಳನ್ನು ನೀಡಲಾಯಿತು. ಚೆಷೈರ್ ಹೊಂ ಪಾಲಿಬೆಟ್ಟದ ಮುಖ್ಯಸ್ಥೆ ಗೀತಾ ಚೆಂಗಪ್ಪ ಮಾತನಾಡಿ, ಕಲ್ಕಿ ಭಕ್ತ ವೃಂದವು ಹಲವು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಹತ್ವ ನೀಡುತ್ತಿದೆ. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತ ನೆಲಹಾಸು ನೀಡಿದ್ದಾರೆ ಎಂದು ನುಡಿದರು.

ದಕ್ಷಿಣ ಕೊಡಗಿನ ಕಲ್ಕಿ ಭಕ್ತ ವೃಂದದ ಸದಸ್ಯರು ಮತ್ತು ವಿಶೇಷಚೇತನ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.